ಜಿ20 ಶೃಂಗಸಭೆಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಬ್ರೆಜಿಲ್ ಅಧ್ಯಕ್ಷ ಲ್ಯೂಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕ್ಯಾಮೆರಾಕ್ಕೆ ನಗೆ ಬೀರಿದರು.
ನವದೆಹಲಿ: ಭಾರತ ಅಧ್ಯಕ್ಷತೆವಹಿಸಿದ್ದ ಎರಡು ದಿನಗಳ ಜಿ20 ಶೃಂಗಸಭೆ ಮುಕ್ತಾಯಗೊಂಡಿದ್ದು, ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ ನಡೆಯಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮುಂದಿನ ವರ್ಷ ಬ್ರೆಜಿಲ್ನಲ್ಲಿ ಜಿ20 ಸಮ್ಮೇಳನ ಆಯೋಜಿಸಲಾಗುವುದು. ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವ ಅವರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಬರುವ ನವೆಂಬರ್ ತಿಂಗಳಲ್ಲಿ ವರ್ಚ್ಯುವಲ್ ಸಭೆ ನಡೆಯಲಿರುವುದಾಗಿ ತಿಳಿಸಿದರು. ನವೆಂಬರ್ ಅಂತ್ಯದವರೆಗೆ ಅಧ್ಯಕ್ಷ ಸ್ಥಾನ ಭಾರತದೊಂದಿಗೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.