ADVERTISEMENT

ಪಂಜಾಬ್‌: ₹ 42,750 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 7:19 IST
Last Updated 5 ಜನವರಿ 2022, 7:19 IST
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ   

ಫಿರೋಜ್‌ಪುರ: ಪಂಜಾಬ್‌ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ₹ 42,750 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಎರಡು ಬೃಹತ್‌ ರಸ್ತೆ ಕಾರಿಡಾರ್‌ಗಳು ಮತ್ತು ಮೂರು ವೈದ್ಯಕೀಯ ಸಂಸ್ಥೆಗಳು ಸೇರಿವೆ.

'ಪಂಜಾಬ್‌ನ ಸಹೋದರ ಮತ್ತು ಸಹೋದರಿಯರ ಪೈಕಿ ನಾನು ಒಬ್ಬನಾಗಲು ನಿರೀಕ್ಷಿಸುತ್ತಿದ್ದೇನೆ. ಫಿರೋಜ್‌ಪುರದ ಕಾರ್ಯಕ್ರಮದಲ್ಲಿ ₹ 42,750 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಗಲಿದೆ. ಇದರಿಂದ ಪ್ರಜೆಗಳ ಬದುಕಿನ ಗುಣಮಟ್ಟ ಸುಧಾರಿಸಲಿದೆ' ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಹುಸೈನ್‌ವಾಲಾದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್‌, ರಾಜ್‌ಗುರು ಮತ್ತು ಸುಖದೇವ್‌ ಅವರ ಸ್ಮಾರಕಕ್ಕೆ ಗೌರವಾರ್ಪಣೆ ಸಲ್ಲಿಸಿದ ಬಳಿಕ ಪಿಎಂ ಮೋದಿ ನೂತನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.