ADVERTISEMENT

ಕೋವಿಡ್ ಬಿಕ್ಕಟ್ಟು: ಕೇಂದ್ರ ಮಂತ್ರಿ ಪರಿಷತ್‌ ಸಭೆ ಇಂದು

ಸಭೆಯಲ್ಲಿ ಲಸಿಕೆ ಕೊರತೆ, ಲಸಿಕೆಗೆ ಏಕರೂಪ ಬೆಲೆ ನಿಗದಿ ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 19:30 IST
Last Updated 29 ಏಪ್ರಿಲ್ 2021, 19:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶಾದ್ಯಂತ ಸೃಷ್ಟಿಯಾಗಿರುವ ‘ಕೋವಿಡ್‌ 19‘ ಸಾಂಕ್ರಾಮಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಂತ್ರಿ ಪರಿಷತ್ತಿನ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಭೀತಿಯನ್ನು ಎದುರಿಸುವುದು ಹಾಗೂ ನಾಗರಿಕರಿಗೆ ಧೈರ್ಯತುಂಬುವಂತೆ ತಮ್ಮ ಸಂಪುಟದ ಸಚಿವರಿಗೆ ಮೋದಿ ಸಲಹೆ ನೀಡುವ ಸಾಧ್ಯತೆ ಇದೆ.

ಪ್ರಧಾನಿ ಮೋದಿಯವರು ಗುರುವಾರವೂ ವಿವಿಧ ಸಚಿವರು ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದರು. ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾಗುವುದಕ್ಕೆ ಒಂದು ದಿನ ಮುಂಚೆ ನಡೆದಿರುವ ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಉಂಟಾಗಿರುವ ಲಸಿಕೆ ಕೊರತೆ ಕುರಿತು ಚರ್ಚೆಯಾಗಿದೆ. ಶುಕ್ರವಾರ ನಡೆಯುವ ಸಭೆಯಲ್ಲೂ ಲಸಿಕೆಗಳ ಕೊರತೆ ಮತ್ತು ಲಸಿಕೆಗಳಿಗೆ ಏಕರೂಪದ ಬೆಲೆ ನಿಗದಿಪಡಿಸುವ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.