ADVERTISEMENT

ಡೆನ್ಮಾರ್ಕ್‌ ಪ್ರಧಾನಿ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಪಿಟಿಐ
Published 9 ಅಕ್ಟೋಬರ್ 2021, 8:25 IST
Last Updated 9 ಅಕ್ಟೋಬರ್ 2021, 8:25 IST
ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸ್ವಾಗತಿಸಿದರು
ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸ್ವಾಗತಿಸಿದರು   

ನವದೆಹಲಿ: ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರು ಫ್ರೆಡೆರಿಕ್ಸನ್‌ ಅವರನ್ನು ಸ್ವಾಗತಿಸಿದರು. ಡ್ಯಾನಿಶ್ ಪ್ರಧಾನಿಯು ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.

ADVERTISEMENT

ಇಬ್ಬರು ಪ್ರಧಾನಿಗಳ ನಡುವಿನ ಮಾತುಕತೆಗೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಫ್ರೆಡೆರಿಕ್ಸನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

‘ಡೆನ್ಮಾರ್ಕ್ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರು ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಸ್ವಾಗತ. ಇದರ ಪರಿಣಾಮವಾಗಿ ನಮ್ಮ ಹಸಿರು ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಮುಂದುವರೆಯುತ್ತದೆ’ ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಡೆನ್ಮಾರ್ಕ್ ಬಲವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೊಂದಿವೆ. 200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿವೆ ಮತ್ತು 60ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಡೆನ್ಮಾರ್ಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.