ADVERTISEMENT

ಏಕತಾ ಪ್ರತಿಮೆ–ಸಬರತಿ ನಡುವೆ ಸಿಪ್ಲೇನ್ ಸೇವೆಗೆ ಮೋದಿ ಚಾಲನೆ

ಪಿಟಿಐ
Published 31 ಅಕ್ಟೋಬರ್ 2020, 9:35 IST
Last Updated 31 ಅಕ್ಟೋಬರ್ 2020, 9:35 IST
ಸೀಪ್ಲೇನ್
ಸೀಪ್ಲೇನ್   

ಕೆವಾಡಿಯಾ(ಗುಜರಾತ್‌): ಕೆವಾಡಿಯಾ ಸಮೀಪದಲ್ಲಿರುವ ಸರ್ದಾರ್‌ ‘ಏಕತಾ ಪ್ರತಿಮೆ‘ಯ ಸ್ಥಳದಿಂದ ನರ್ಮದಾ ಜಿಲ್ಲೆಯ ಸಬರಮತಿ ನಡುವೆ ಹಾರಾಟ ನಡೆಸುವ ‘ಸೀಪ್ಲೇನ್‌‘ ಸೇವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಇಲ್ಲಿಗೆ ಸಮೀಪವಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಹತ್ತಿರವಿರುವ ‘ಪಾಂಡ್‌ -3‘ರರಿಂದ ಡಬಲ್‌ ಎಂಜಿನ್ ವಿಮಾನದಲ್ಲಿ ಕುಳಿತುಕೊಳ್ಳುವ ಮೂಲಕ ಮೋದಿಯವರು ಸೀಪ್ಲೇನ್‌ ಸೇವೆಯನ್ನು ಉದ್ಘಾಟಿಸಿದರು.

ವಿಮಾನ ಹತ್ತುವ ಮೊದಲು ಮೋದಿ ವಾಟರ್ ಏರೋಡ್ರೋಮ್‌ನಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ಸೀಪ್ಲೇನ್‌ ಸೇವೆಯ ಬಗ್ಗೆ ವಿವರಗಳನ್ನು ಪಡೆದರು.

ADVERTISEMENT

ಸರ್ದಾರ್‌ ಸರೋವರದ ‘ಪಾಂಡ್‌–3‘ ದಿಂದ ಮೋದಿ ಅವರನ್ನು ಹೊತ್ತು ಹಾರಿದ 19 ಆಸನಗಳ ವಿಮಾನ, 40 ನಿಮಿಷಗಳಲ್ಲಿ ಸುಮಾರು 200 ಕಿ.ಮೀ ದೂರವನ್ನು ಕ್ರಮಿಸಿ, ಸಬರಮತಿ ರಿವರ್‌ಫ್ರಂಟ್ ನೀರಿನಲ್ಲಿ ಇಳಿಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.