ADVERTISEMENT

ನೆಚ್ಚಿನ ನಟ 'ಮೋದಿ' ಎಂದ ರಾಜಸ್ಥಾನ ಬಿಜೆಪಿ ಸರ್ಕಾರದ ಸಿಎಂ; ಕಾಂಗ್ರೆಸ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 4:31 IST
Last Updated 12 ಮಾರ್ಚ್ 2025, 4:31 IST
   

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ 'ನೆಚ್ಚಿನ ನಟ' ಎಂದಿರುವ ಬಗ್ಗೆ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಸಿಎಂ ಶರ್ಮಾ ಅವರನ್ನು, 'ನಿಮ್ಮ ನೆಚ್ಚಿನ ನಟ ಯಾರು?' ಎಂದು ಮಾಧ್ಯಮದರು ಕೇಳಿದ್ದರು. ಅದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ್ದ ಅವರು, 'ನರೇಂದ್ರ ಮೋದಿ' ಎಂದು ಹೇಳಿದ್ದರು.

ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ, ಪ್ರಧಾನ ಮೋದಿ ನಾಯನ ಅಲ್ಲ ನಟ ಎಂಬುದನ್ನು ಕಾಂಗ್ರೆಸ್‌ ನಾಯಕರು ತುಂಬಾ ದಿನಗಳಿಂದ ಹೇಳುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಸಿಎಂ ಮಾತನಾಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ದೋತಾಸ್ರಾ, 'ಮೋದಿ ಅವರು ನಾಯಕನಲ್ಲ, ನಟ ಎಂದು ನಾವು ಬಹಳ ಸಮಯದಿಂದ ಹೇಳುತ್ತಿದ್ದೇವೆ. ತಡವಾಗಿಯಾದರೂ ಸರಿ, ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಕೂಡ ಇದೀಗ ಮೋದಿ ಅವರು ಸಾರ್ವಜನಿಕ ನಾಯಕರಲ್ಲ ನಟ ಎಂದು ಹೇಳಲಾರಂಭಿಸಿದ್ದಾರೆ. ಕ್ಯಾಮೆರಾ ಎದುರಿಸುವುದು, ಟೆಲಿಪ್ರಾಂಪ್ಟರ್ ಬಳಸುವುದು, ವೇಷಭೂಷಣ ನಿರ್ವಹಣೆ ಹಾಗೂ ಆಡಂಬರದ ಮಾತುಗಳನ್ನಾಡುವ ವಿಚಾರದಲ್ಲಿ ಮೋದಿ ಪರಿಣತರಾಗಿದ್ದಾರೆ' ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.