ADVERTISEMENT

ಹುತಾತ್ಮ, ಮಹಾತ್ಮರಿಗೆ ನರೇಂದ್ರ ಮೋದಿ ನಮನ

ಪ್ರಮಾಣವಚನ ಸ್ವೀಕಾರ ಹಿನ್ನೆಲೆ: ರಾಜ್‌ಘಾಟ್, ಇಂಡಿಯಾ ಗೇಟ್‌ಗೆ ಪ್ರಧಾನಿ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಮೇ 2019, 2:11 IST
Last Updated 30 ಮೇ 2019, 2:11 IST
ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು –ಎಎನ್‌ಐ ಚಿತ್ರ
ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು –ಎಎನ್‌ಐ ಚಿತ್ರ   

ನವದೆಹಲಿ:ಎರಡನೇ ಬಾರಿಗೆ ಪ್ರಧಾನಿಯಾಗಿ ಇಂದು ಸಂಜೆ ಅಧಿಕಾರ ಸ್ವೀಕರಿಸಲಿರುವನರೇಂದ್ರ ಮೋದಿಅವರು ಬೆಳಿಗ್ಗೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ‘ಸದೈವ್ ಅಟಲ್ ಸಮಾಧಿ’ಗೆ ತೆರಳಿ ಗೌರವ ಸಲ್ಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೆಲವು ಗಣ್ಯರು ಮೋದಿ ಜತೆಗಿದ್ದರು.

ADVERTISEMENT

ಅಲ್ಲಿಂದ ನೇರವಾಗಿ ಇಂಡಿಯಾಗೇಟ್‌ನಲ್ಲಿರುವ ಯುದ್ಧಸ್ಮಾರಕಕ್ಕೆ ತೆರಳಿದ ಮೋದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಇನ್ನಷ್ಟು...

‘ಸದೈವ್ ಅಟಲ್ ಸಮಾಧಿ’ಗೆ ತೆರಳಿದ ಮೋದಿಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ನಮನ ಸಲ್ಲಿಸಿದರು – ಎಎನ್‌ಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.