ನವದೆಹಲಿ:ನವಿಲಿನ ಜೊತೆಗಿನ ಒಡನಾಟದ ದೃಶ್ಯಾವಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಬಿಡುವಿನ ಸಂದರ್ಭದಲ್ಲಿ ಮೋದಿ ಅವರು ನವಿಲಿನ ಜೊತೆ ಕಾಲ ಕಳೆಯುವ ಈ ವಿಡಿಯೊ ಜನಮೆಚ್ಚುಗೆಯನ್ನು ಗಳಿಸಿದೆ.
ಹಿಂದಿ ಕವಿತೆಯ ಜೊತೆಗೆ ‘ಅಮೂಲ್ಯ ಕ್ಷಣಗಳು’ ಎಂದು ಶೀರ್ಷಿಗೆ ನೀಡಿ1.47 ನಿಮಿಷದ ಈ ವಿಡಿಯೊವನ್ನು ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಅವರು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಹಿಡಿದಿದ್ದ ತಟ್ಟೆಯಿಂದ ರಾಷ್ಟ್ರಪಕ್ಷಿ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದೆ. ಮನೆ ಒಳಗೆ ಮತ್ತು ಹೊರಗೆ ನವಿಲು ಆಹಾರ ತಿನ್ನುವ ಜೊತೆಗೆವಾಕಿಂಗ್ ಮಾಡುವ ವೇಳೆ ನವಿಲು ಗರಿಬಿಚ್ಚಿ ಹೆಜ್ಜೆ ಹಾಕುವ ದೃಶ್ಯ ಈ ವಿಡಿಯೊದಲ್ಲಿದೆ.ಅಲ್ಲದೆ ಪ್ರಧಾನಿ ಪುಸ್ತಕ ಓದುತ್ತಿದ್ದಾಗ ಅವರ ಪಕ್ಕದಲ್ಲೇ ನವಿಲು ಆಹಾರ ತಿನ್ನುತ್ತಿರುವ ದೃಶ್ಯವೂ ಇದೆ.
ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮೋದಿ ನಿವಾಸದಲ್ಲಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.