ADVERTISEMENT

ಕೋವಿಡ್‌ ಲಸಿಕೆ ಅಭಿವೃದ್ಧಿ: ಪ್ರಗತಿ ಪರಿಶೀಲನೆ ನಡೆಸಿದ ಮೋದಿ

ಪಿಟಿಐ
Published 21 ನವೆಂಬರ್ 2020, 2:19 IST
Last Updated 21 ನವೆಂಬರ್ 2020, 2:19 IST
ಲಸಿಕೆ ಅಭಿವೃದ್ಧಿಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ –ಪಿಟಿಐ ಚಿತ್ರ
ಲಸಿಕೆ ಅಭಿವೃದ್ಧಿಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ –ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌–19 ಚಿಕಿತ್ಸೆಗಾಗಿ ಇರುವ ಲಸಿಕೆಯ ಅಭಿವೃದ್ಧಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಶುಕ್ರವಾರ ಪ್ರಗತಿಪರಿಶೀಲನಾ ಸಭೆ ನಡೆಸಿದರು.

ಲಸಿಕೆಗೆ ಬೇಕಾಗುವ ಒಪ್ಪಿಗೆಗಳು, ಖರೀದಿ, ಲಸಿಕೆ ಲಭ್ಯವಾದ ಬಳಿಕ, ಅದನ್ನು ಯಾರಿಗೆ ಆದತ್ಯೆ ಮೇಲೆ ನೀಡಬೇಕು, ಲಸಿಕೆ ತಲುಪಿಸುವುದಕ್ಕೆ ಡಿಜಿಟಲ್‌ ತಂತ್ರಜ್ಞಾನ ವೇದಿಕೆಗಳ ಬಳಕೆ, ಆರೋಗ್ಯ ಕಾರ್ಯಕರ್ತರನ್ನು ತಲುಪುವುದು ಹೇಗೆ?, ಲಸಿಕೆ ನೀಡುವುದಕ್ಕೆ ಮತ್ತಷ್ಟು ಸಿಬ್ಬಂದಿಯ ನೇಮಕ ಮುಂತಾದ ವಿಷಯಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೋದಿ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

‘ಲಸಿಕೆಗೆ ಒಪ್ಪಿಗೆಯನ್ನು ಪಡೆಯಲು ನಿಗದಿತ ಸಮಯದ ಯೋಜನೆ ಹಾಗೂ ಸಮಯಕ್ಕೆ ಸರಿಯಾಗಿ ಲಸಿಕೆಯ ಖರೀದಿ ಮತ್ತು ಲಸಿಕೆ ಲಭ್ಯವಾದ ಬಳಿಕ ಅದರ ವಿತರಣೆಗೆ ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ನಿರ್ದೇಶಿಸಿದರು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಗಳ ಮೂರನೇ ಹಂತದ ಪ್ರಯೋಗಗಳ ಫಲಿತಾಂಶವು ಬಂದ ಕೂಡಲೇ, ನಮ್ಮ ನಿಯಂತ್ರಕರು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ನಂತರದಲ್ಲಿ ತಕ್ಷಣದಲ್ಲೇ ಅವುಗಳ ಬಳಕೆಗೆ ಅನುಮತಿ ನೀಡಲಿದ್ದಾರೆ. ಆದ್ಯತೆಯ ಮೇಲೆ ಯಾರಿಗೆ ಲಸಿಕೆ ಲಭ್ಯವಾಗಬೇಕು ಎನ್ನುವ ಸೂತ್ರದ ಮೇಲೆ ದೇಶದ ಎಲ್ಲ ಪ್ರದೇಶಗಳಿಗೂ ಹಾಗೂ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಒಟ್ಟು ಐದು ಲಸಿಕೆಗಳು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದು, ಈ ಪೈಕಿ ನಾಲ್ಕು ಲಸಿಕೆಗಳು ಎರಡು ಮತ್ತು ಮೂರನೇ ಹಂತದಲ್ಲಿವೆ. ಒಂದು ಲಸಿಕೆ ಒಂದು ಮತ್ತು ಎರಡನೇ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.