ADVERTISEMENT

ಪ್ರಧಾನಿ ಮೋದಿ ಫ್ರಾನ್ಸ್‌ ಪ್ರವಾಸ ಆರಂಭ: ಬಾಸ್ಟಿಲ್ ದಿನ ಆಚರಣೆಯಲ್ಲಿ ಭಾಗಿ 

ಪಿಟಿಐ
Published 13 ಜುಲೈ 2023, 5:30 IST
Last Updated 13 ಜುಲೈ 2023, 5:30 IST
ಪ್ರಧಾನಿ ನರೇಂದ್ರ ಮೋದಿ– ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ– ಪಿಟಿಐ ಚಿತ್ರ   

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಫ್ರಾನ್ಸ್‌ ಪ್ರವಾಸವನ್ನು ಆರಂಭಿಸಿದ್ದಾರೆ. ಇಂದು (ಗುರುವಾರ) ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಪ್ಯಾರಿಸ್‌ಗೆ ತೆರಳಿದರು.

ನಾಳೆ ನಡೆಯಲಿರುವ ಫ್ರಾನ್ಸ್‌ ರಾಷ್ಟ್ರೀಯ ದಿನವಾದ ‘ಬಾಸ್ಟಿಲ್ ದಿನ‘ದ ಆಚರಣೆಯಲ್ಲಿ ವಿಶೇಷ ಅತಿಥಿಯಾಗಿ ಅವರು ಭಾಗವಹಿಸಲಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರೋನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ತೆರಳಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಭಾರತದ ಸೇನೆ, ನೌಕಾಪಡೆ ಮತ್ತು ವಾಯು ಸೇನೆಯ ತುಕುಡಿಗಳು ಪರೇಡ್‌ನಲ್ಲಿ ಭಾಗವಹಿಸಲಿವೆ. ಅಲ್ಲದೆ 2015 ರಲ್ಲಿ ಫ್ರಾನ್ಸ್‌ನಿಂದ ಖರೀದಿಸಲಾಗಿದ್ದ 36 ರೆಫಲ್‌ ಫೈಟರ್‌ ಜೆಟ್‌ಗಳ ಪೈಕಿ ಎರಡು ಜೆಟ್‌ಗಳು ಈ ಪರೇಡ್‌ನಲ್ಲಿ ತಾಲೀಮು ಪ್ರದರ್ಶಿಸಲಿವೆ.

ADVERTISEMENT

ತಮ್ಮ ಫ್ರಾನ್ಸ್ ಭೇಟಿಯು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಚರ್ಚೆ ನಡೆಸಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿನ ಭಾರತೀಯ ಸಮುದಾಯ ಮತ್ತು ಉನ್ನತ ಮಟ್ಟದ ಸಿಇಒಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.

ಜತೆಗೆ ಜುಲೈ 15 ರಂದು ಅಬುಧಾಬಿ ಮತ್ತು ಯುಎಇಗೆ ಭೇಟಿ ನೀಡಲಿದ್ದು, ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: https://www.prajavani.net/news/india-news/more-submarines-jets-for-indian-navy-on-cards-as-pm-narendra-modi-visits-france-2385433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.