ADVERTISEMENT

ಗುಜರಾತ್‌ನಲ್ಲಿ ಇಂದು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 1:45 IST
Last Updated 16 ಜುಲೈ 2021, 1:45 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಇಂದು (ಶುಕ್ರವಾರ) ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.

ಹೊಸದಾಗಿ ಮೇಲ್ದರ್ಜೆಗೇರಿಸುವ ಗಾಂಧಿನಗರ ರಾಜಧಾನಿ ರೈಲು ನಿಲ್ದಾಣ, ಮಹೇಶನ-ವಾರೆಥಾ ವಿದ್ಯುದೀಕೃತ ರೈಲು ಮಾರ್ಗ ಮತ್ತು ಹೊಸದಾಗಿ ವಿದ್ಯುದೀಕರಣಗೊಂಡಿರುವಸುರೇಂದ್ರನಗರ್‌-ಪಿಪವಾವ್‌ ವಿಭಾಗಗಳು ಹೊಸ ಯೋಜನೆಗಳ ಭಾಗವಾಗಿವೆ.ಇದೇ ವೇಳೆ ಮೋದಿ, ಗುಜರಾತ್ ಸೈನ್ಸ್ ಸಿಟಿಯಲ್ಲಿನ ನೇಚರ್ ಪಾರ್ಕ್ ಹಾಗೂಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿಯನ್ನೂ ಉದ್ಘಾಟಿಸಲಿದ್ದಾರೆ.

ಗಾಂಧಿನಗರಮತ್ತು ವಾರಣಾಸಿಗೆ ಸಂಪರ್ಕ ಕಲ್ಪಿಸುವ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ಗಾಂಧಿನಗರ ಮತ್ತುವಾರೆಥಾ ನಡುವೆದುರಸ್ತಿ ರೈಲುಗಳ ಸಂಚಾರಕ್ಕೂ ಚಾಲನೆ ಸಿಗಲಿದೆ.

ADVERTISEMENT

ಈ ಸಂಬಂಧ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದ ಪ್ರಧಾನಿ ಮೋದಿ,ʼಜುಲೈ 16ರ ಸಂಜೆ4.30ಕ್ಕೆ ಗುಜರಾತ್‌ನಲ್ಲಿ ಆಸಕ್ತಿದಾಯಕ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಯೋಜನೆಗಳುಪರಿಸರ, ಪ್ರಕೃತಿ, ರೈಲ್ವೇ ಮತ್ತು ವಿಜ್ಞಾನ ವಿಭಾಗಗಳನ್ನೂ ಒಳಗೊಂಡಿವೆʼ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.