ADVERTISEMENT

ಅರ್ಥಶಾಸ್ತ್ರಜ್ಞರ ಜತೆ ಮೋದಿ ಸಂವಾದ ನಾಳೆ

ಪಿಟಿಐ
Published 6 ಜನವರಿ 2021, 22:00 IST
Last Updated 6 ಜನವರಿ 2021, 22:00 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರುದೇಶದ ಮುಂಚೂಣಿಯ ಅರ್ಥಶಾಸ್ತ್ರಜ್ಞರ ಜತೆಗೆ ಶುಕ್ರವಾರ ಸಂವಾದ ನಡೆಸಲಿದ್ದಾರೆ. ನೀತಿ ಆಯೋಗವು ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ, ಕೋವಿಡ್‌–19 ಕಾರಣದಿಂದಾಗಿ ಅನೇಕ ಕ್ಷೇತ್ರದಲ್ಲಿ ಆಗಿರುವ ಅನಿಶ್ಚಿತತೆಯನ್ನು ನಿವಾರಿಸಲು ಬಜೆಟ್‌ನಲ್ಲಿ ಯಾವೆಲ್ಲ ಯೋಜನೆಗಳನ್ನು ರೂಪಿಸಬೇಕು ಎಂಬ ಬಗ್ಗೆ ಸಲಹೆಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

ವರ್ಚುವಲ್‌ ಆಗಿ ನಡೆಯಲಿರುವ ಈ ಸಂವಾದದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮಿತಾಭ್‌ ಕಾಂತ್‌ ಪಾಲ್ಗೊಳ್ಳುವರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇ 7.5ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐ ಹೇಳಿತ್ತು. ಆದರೆ, ಅದು ಶೇ 10.3ರಷ್ಟು ಕುಸಿಯಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿತ್ತು.ಭಾರತದ ಅರ್ಥ ವ್ಯವಸ್ಥೆಯು ಸೆಪ್ಟೆಂಬರ್‌ನಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಅಂದಾಜಿಗಿಂತ ಹೆಚ್ಚು ವೇಗದಲ್ಲಿ ಚೇತರಿಕೆ ಕಂಡಿದೆ. ಜಿಡಿಪಿ ಕುಸಿತವು ಶೇ 7.5ಕ್ಕಿಂತಲೂ ಕಡಿಮೆಯಾಗಲು ತಯಾರಿಕಾ ಕ್ಷೇತ್ರದ ಪ್ರಗತಿಯು ಸಹಕರಿಸಿದೆ. ಈ ಕಾರಣದಿಂದ ಮೋದಿ ಅವರ ಸಭೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೇಂದ್ರದ2021–22ನೇ ಸಾಲಿನ ಬಜೆಟ್‌ ಫೆಬ್ರುವರಿ 1ರಂದು ಮಂಡನೆಯಾಗುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.