ADVERTISEMENT

ನ.28ರಂದು ಪುಣೆ ಸೆರಂ ಇನ್‌ಸ್ಟಿಟ್ಯೂಟ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪಿಟಿಐ
Published 26 ನವೆಂಬರ್ 2020, 10:15 IST
Last Updated 26 ನವೆಂಬರ್ 2020, 10:15 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಪುಣೆ: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಔಷಧ ಕಂಪನಿಯ ಸಹಯೋಗದಲ್ಲಿ ‘ಕೋವಿಡ್‌ 19‘ಕ್ಕೆ ಚಿಕಿತ್ಸಾ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಕಂಪನಿಗೆ ಇದೇ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪ್ರಧಾನಿ ಮೋದಿಯವರು ಶನಿವಾರ ಸೆರಂ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡುವ ಕುರಿತು ಮಾಹಿತಿ ತಲುಪಿದೆ. ಆದರೆ ಪ್ರವಾಸದ ಪೂರ್ಣ ವಿವರಗಳು ಇನ್ನೂ ಲಭ್ಯವಾಗಿಲ್ಲ‘ ಎಂದು ಪುಣೆ ವಲಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ.

‘ಪ್ರಧಾನಿಯವರು ಪುಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೊರೊನಾ ವೈರಸ್‌ ಲಸಿಕೆಯನ್ನ ಪ್ರಾಯೋಗಿಕವಾಗಿ ಪಡೆದ ಸ್ವಯಂ ಸೇವಕರ ಆರೋಗ್ಯ, ಲಸಿಕೆಯ ಉತ್ಪಾದನೆ ಸ್ಥಿತಿ–ಗತಿ, ಲಸಿಕೆ ಪೂರೈಕೆಗೆ ಯಾವ ರೀತಿ ಸಿದ್ಧತೆಗಳಾಗಿವೆ ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ‘ ಎಂದು ರಾವ್ ತಿಳಿಸಿದರು.

ADVERTISEMENT

ಅಲ್ಲದೆ, ಡಿ.4ರಂದು 100 ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರು ಸೆರಂ ಇನ್‌ಸ್ಟಿಟ್ಯೂಟ್‌ ಮತ್ತು ಜೆನೊವಾ ಬಯೋಫಾರ್ಮ್‌ಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.