ADVERTISEMENT

ಬೆಂಗಳೂರು–ಚೆನ್ನೈ ಹೆದ್ದಾರಿಗೆ ಪ್ರಧಾನಿಯಿಂದ ಶಂಕುಸ್ಥಾಪನೆ

262 ಕಿ.ಮೀ, ಅಂದಾಜು ವೆಚ್ಚ ₹ 14,870 ಕೋಟಿ

ಪಿಟಿಐ
Published 26 ಮೇ 2022, 20:18 IST
Last Updated 26 ಮೇ 2022, 20:18 IST
   

ಚೆನ್ನೈ: ಬೆಂಗಳೂರು–ಚೆನ್ನೈ ನಡುವೆಅಂದಾಜು ₹ 14,870 ಕೋಟಿ ವೆಚ್ಚದಲ್ಲಿ 262 ಕಿ.ಮೀ ನೂತನ ಹೆದ್ದಾರಿ ಅಭಿವೃದ್ಧಿ ಪಡಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಚಾಲನೆ ನೀಡಿದರು.

ಉದ್ದೇಶಿತ ಹೆದ್ದಾರಿ ಅಭಿವೃದ್ಧಿಯಿಂದ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಸುಮಾರು 2–3 ಗಂಟೆ ಕಡಿಮೆಯಾಗಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಮೂಲಕ ನೂತನ ಹೆದ್ದಾರಿ ಹಾದುಹೋಗಲಿದೆ.

ಇದು ಸೇರಿದಂತೆ₹ 28,000 ಕೋಟಿ ಅಂದಾಜು ವೆಚ್ಚದ ಆರು ವಿವಿಧ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

ADVERTISEMENT

ಉದ್ಘಾಟನೆ:ಅಲ್ಲದೆ, ಸುಮಾರು 2,960 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಐದು ವಿವಿಧ ಯೋಜನೆಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ‘ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡಬೇಕು. ರಾಜ್ಯದಲ್ಲಿ ಅಭಿವೃದ್ಧಿ ಆರ್ಥಿಕ ಮಾನದಂಡವನ್ನಷ್ಟೇ ಒಳಗೊಂಡಿಲ್ಲ, ಸಮಗ್ರ ಅಭಿವೃದ್ಧಿಗೆ ಒತ್ತುನೀಡುವ ದ್ರಾವಿಡ ಮಾದರಿಯದ್ದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.