ಸಾಂದರ್ಭಿಕ ಚಿತ್ರ
ಪೂಂಚ್: ಭಯೋತ್ಪಾದಕರ ಸಂಪರ್ಕ ಜಾಲವನ್ನು ಕಳಚಿಹಾಕುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಡಿ ಜಿಲ್ಲೆ ಪೂಂಚ್‌ನ ಹಲವು ಪ್ರದೇಶಗಳಲ್ಲಿ ಭಾನುವಾರ ಸರಣಿ ದಾಳಿಗಳನ್ನು ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಕಾರ್ಯಾಚರಣೆ ಮಾಡುವ ಉಗ್ರರ ಸಂಬಂಧಿಕರು ಮತ್ತು ಭೂಗತವಾಗಿ ಉಗ್ರರ ಪರ ಕೆಲಸ ಮಾಡುವವರ ಮನೆಗಳನ್ನು ಗುರಿಯಾಗಿಸಿ ಶೋಧ ನಡೆದಿದೆ. ಕೆಲವರ ಮನೆಗಳಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ. ಕೆಲವು ಪ್ರದೇಶಗಳಲ್ಲಿ ದಾಳಿ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.