ADVERTISEMENT

ಬಿಜೆಪಿ ರ್‍ಯಾಲಿಯಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಪ್ರದರ್ಶನ: ಎಫ್‌ಐಆರ್ ದಾಖಲು

ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ನಡೆ ರ್‍ಯಾಲಿ

ಏಜೆನ್ಸೀಸ್
Published 29 ಸೆಪ್ಟೆಂಬರ್ 2018, 13:03 IST
Last Updated 29 ಸೆಪ್ಟೆಂಬರ್ 2018, 13:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಬಿಜೆಪಿ ಹಿರಿಯ ನಾಯಕ ರಾಜೀವ್ ಜಸ್ರೊಟಿಯಾ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಲಾಗಿದೆ.

‘ರಾಷ್ಟ್ರಗೌರವಕ್ಕೆ ದಕ್ಕೆ ತಡೆ ಕಾಯ್ದೆಯ ಕಲಂ 2ರ ಅನ್ವಯ(ರಾಷ್ಟ್ರಧ್ವಜಕ್ಕೆ ಅಥವಾ ಸಂವಿಧಾನಕ್ಕೆ ಅಪಮಾನ) ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಿದ ಕುರಿತು ಸ್ಥಳೀಯ ನಿವಾಸಿ ವಿನೋದ್ ನಿಝಾವಾನ್ ಎಂಬುವವರು ದೂರು ದಾಖಲಿಸಿದ್ದು, ಜತೆಗೆ ವಿಡಿಯೊವನ್ನೂ ಸಲ್ಲಿಸಿದ್ದಾರೆ.

ಇದೇ 19ರಂದು ಬಿಜೆಪಿ ಅಭ್ಯರ್ಥಿ ರಾಹುಲ್‌ದೇವ್ ಶರ್ಮಾ ಅವರು ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶಿವನಗರದ ತಮ್ಮ ನಿವಾಸದಿಂದ ತೆರಳಿದ್ದ ವೇಳೆ ರ್‍ಯಾಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.