ADVERTISEMENT

ಠಾಣೆ | ₹53 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ಪಿಟಿಐ
Published 10 ಆಗಸ್ಟ್ 2025, 10:02 IST
Last Updated 10 ಆಗಸ್ಟ್ 2025, 10:02 IST
   

ಠಾಣೆ : ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ₹53 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ಹಾಗೂ ತಂಬಾಕನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ತಂಡವು ಶುಕ್ರವಾರ ನಾರ್ಪೋಲಿ ಟೋಲ್ ಪ್ಲಾಜಾದಲ್ಲಿ ಕರ್ನಾಟಕ ನೋಂದಾಣಿಯ ವಾಹನವನ್ನು ತಡೆದು ಮಾರಾಟಕ್ಕೆಂದು ಸಾಗಿಸುತ್ತಿದ್ದ ಗುಟ್ಕಾ, ಪಾನ್ ಮಸಾಲ ಮತ್ತು ಇತರ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ಮಾರಾಟಗಾರರ ವಿರುದ್ದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಮಿಥುನ್ ಭೋಯಿರ್ ತಿಳಿಸಿದ್ದಾರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.