ADVERTISEMENT

ಎನ್‌ಕೌಂಟರ್‌: ಮೂವರು ಉಗ್ರರ ಸಾವು, ಪೊಲೀಸ್‌ ಹುತಾತ್ಮ

ಪಿಟಿಐ
Published 19 ಫೆಬ್ರುವರಿ 2021, 6:01 IST
Last Updated 19 ಫೆಬ್ರುವರಿ 2021, 6:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಮತ್ತು ಬಡ್ಗಾಮ್ ಜಿಲ್ಲೆಗಳಲ್ಲಿ ಉಗ್ರರು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದು, ಪೊಲೀಸರೊಬ್ಬರು ಹುತಾತ್ಮರಾಗಿದ್ದಾರೆ.

ಶೋ‍ಪಿಯಾನ್‌ ಜಿಲ್ಲೆಯಬಡ್ಗಾಮ್‌ನಲ್ಲಿ ಉಗ್ರರ ಇರುವಿಕೆಯನ್ನು ಅರಿತ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದವು. ಉಗ್ರರು ಮೊದಲು ಗುಂಡು ಹಾರಿಸಿದ್ದರಿಂದ ಭದ್ರತಾ ಪಡೆಗಳೂ ಪ್ರತಿಯಾಗಿ ಗುಂಡು ಹಾರಿಸಿದವು. ಘಟನೆಯಲ್ಲಿ ಮೂವರು ಉಗ್ರರು ಹತರಾದರು.

ಬಡ್ಗಾಮ್‌ ಜಿಲ್ಲೆಯ ಜನಿಗಾಂ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡರು. ಈ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.