ADVERTISEMENT

ಪಶ್ಚಿಮ ಬಂಗಾಳ ಗಲಭೆ: ಕೂಚ್‌ ಬೆಹರ್‌ಗೆ ಭೇಟಿ ನೀಡದಂತೆ ರಾಜಕಾರಣಿಗಳಿಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 5:54 IST
Last Updated 11 ಏಪ್ರಿಲ್ 2021, 5:54 IST
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಬಿಗಿ ಭದ್ರತೆ – ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಬಿಗಿ ಭದ್ರತೆ – ಪಿಟಿಐ ಚಿತ್ರ   

ಕೂಚ್‌ ಬೆಹರ್‌: ಪಶ್ಚಿಮ ಬಂಗಾಳದ ಕೂಚ್‌ ಬೆಹರ್‌ನಲ್ಲಿ ಮತದಾನದ ದಿನ (ಶನಿವಾರ) ನಡೆದ ಗಲಭೆಯ ಬಳಿಕ ಜಿಲ್ಲೆಗೆಮುಂದಿನ ಮೂರುದಿನಗಳವರೆಗೆ ರಾಜಕಾರಣಿಗಳು ಪ್ರವೇಶಿಸಬಾರದು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ಏಪ್ರಿಲ್‌ 17ರಂದು ನಡೆಯುವ ಐದನೇ ಹಂತದ ಚುನಾವಣೆಗೆ ʼಮೌನ ಅವಧಿʼಯನ್ನು48 ಗಂಟೆಗಳಿಂದ 72 ಗಂಟೆಗಳವರೆಗೆ ವಿಸ್ತರಿಸಲಾಗಿದ್ದು, ಈ ಮೂಲಕ ಪ್ರಚಾರದ ಅವಧಿಯನ್ನೂಕಡಿತಗೊಳಿಸಲಾಗಿದೆ.

ಇದಲ್ಲದೆ, ಮುಂದಿನ 72 ಗಂಟೆಗಳ ಕಾಲ ಕೂಚ್ ಬೆಹಾರ್‌ ಸಂಘರ್ಷದ ಸ್ಥಳದಲ್ಲಿನಬೆಳವಣಿಗೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತೆ ವಿಶೇಷ ಸಾಮಾನ್ಯ ವೀಕ್ಷಕ, ವಿಶೇಷ ಪೊಲೀಸ್ ವೀಕ್ಷಕ ಮತ್ತು ಬಂಗಾಳದ ಮುಖ್ಯ ಚುನಾವಣಾಧಿಕಾರಿಗಳಿಗೆ ಕೋರಲಾಗಿದೆ.

ADVERTISEMENT

ಮಮತಾ ಬ್ಯಾನರ್ಜಿ ಅವರು ಘರ್ಷಣೆನಡೆದ ಪ್ರದೇಶಕ್ಕೆ ಭಾನುವಾರ ಭೇಟಿ ನೀಡುವುದಾಗಿ ಘೋಷಿಸಿದ್ದರು. ಪ್ರಕರಣವನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಾದ್ಯಂತ ಕಪ್ಪು ಪಟ್ಟಿ ಧರಿಸಿಪ್ರತಿಭಟನೆ ನಡೆಸಲು ಯೋಜಿಸಿತ್ತು. ಹೀಗಾಗಿ ಚುನಾವಣಾ ಆಯೋಗದ ಕ್ರಮವನ್ನು ಟಿಎಂಸಿ ವಿರೋಧಿಸಿದೆ.

ಕಳೆದತಿಂಗಳು ಟಿಎಂಸಿ ಸೇರಿರುವ ಯಶವಂತ ಸಿನ್ಹಾ ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದು,'ಮಮತಾ ಅವರು ಕೂಚ್ ಬೆಹರ್‌ಗೆ ಹೋಗುವುದನ್ನು ತಡೆಯುವ ಮೂಲಕ ಚುನಾವಣಾ ಆಯೋಗವು ತನ್ನನ್ನುತಾನು ಮಣ್ಣಿನಿಂದ ಮುಚ್ಚಿಕೊಂಡಿದೆ. ಇದೆಲ್ಲದರ ನಂತರವೂ ಅವರು ಬಂಗಾಳದಮುಖ್ಯಮಂತ್ರಿಯಾಗಿದ್ದಾರೆ. ಈ ದುರದೃಷ್ಟಕರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡುವುದು ಅವರ ಕರ್ತವ್ಯವಾಗಿದೆ. ಚುನಾವಣಾ ಆಯೋಗದ ಕ್ರಮನ್ಯಾಯಯುತವಾಗಿಲ್ಲ ಎಂದು ನಮಗೆ ತಿಳಿದಿದೆʼ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.