ಪಟ್ನಾ: ಅಕ್ಟೋಬರ್ 6ರಂದು ವಿಧಾನಸಭೆ ಚುನವಣಾ ವೇಳಾಪಟ್ಟಿ ಘೋಷಣೆಯಾದಂದಿನಿಂದ ಬಿಹಾರದಾದ್ಯಂತ ₹64.13 ಕೋಟಿ ಮೌಲ್ಯದ ಮದ್ಯ, ನಗದು, ಮಾದಕ ದ್ರವ್ಯ ಮತ್ತು ಉಚಿತವಾಗಿ ನೀಡಲು ಸಂಗ್ರಹಿಸಲಾಗಿದ್ದ ವಸ್ತುಗಳನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮದ್ಯ ಮುಕ್ತ ರಾಜ್ಯವಾದ ಬಿಹಾರದಲ್ಲಿ ವಶಪಡಿಸಿಕೊಂಡಿರುವ ಈ ವಸ್ತುಗಳಲ್ಲಿ ಮದ್ಯದ ಮೌಲ್ಯವೇ ₹23.41 ಕೋಟಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ ಇತ್ತೀಚೆಗೆ ಒದಗಿಸಿದ ಮಾಹಿತಿಯ ಪ್ರಕಾರ, ಉಚಿತವಾಗಿ ನೀಡಲು ಸಂಗ್ರಹಿಲಾದ ₹14 ಕೋಟಿ ಮೌಲ್ಯದ ವಸ್ತುಗಳು, ₹4.19 ಕೋಟಿ ನಗದು ಮತ್ತು ₹16.88 ಕೋಟಿ ಮೌಲ್ಯದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 6ರಿಂದ ಪೊಲೀಸ್ ಮತ್ತು ಇತರ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ 753 ಜನರನ್ನು ಬಂಧಿಸಿದ್ದು, 13,587 ಜಾಮೀನುರಹಿತ ವಾರಂಟ್‌ಗಳನ್ನು ಜಾರಿ ಮಾಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.