ಪೋಶೆ ಕಾರು ಅಪಘಾತ
ಪಿಟಿಐ ಚಿತ್ರ
ಮುಂಬೈ: ಪೋಶೆ ಕಾರು ಅಪಘಾತದಲ್ಲಿ ಬಂಧಿತನಾಗಿರುವ ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ ಆರೋಪದ ಅಡಿ ಬಂಧಿತರಾಗಿರುವ ಡಾ. ಅಜಯ್ ತವಾರೆ ಮತ್ತು ಡಾ. ಶ್ರೀಹರಿ ಹಲ್ನೋರ್ ಅವರನ್ನು ಮಹಾರಾಷ್ಟ್ರ ಸರ್ಕಾರವು ಬುಧವಾರ ಅಮಾನತು ಮಾಡಿದೆ.
ಅಲ್ಲದೆ, ಬಿ.ಜೆ. ವೈದ್ಯಕೀಯ ಕಾಲೇಜು ಮತ್ತು ಸಸ್ಸೂನ್ ಆಸ್ಪತ್ರೆಯ ಡೀನ್ ಡಾ. ವಿನಾಯಕ ಕಾಳೆ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.