ನವದೆಹಲಿ: ಯುಪಿಎಸ್ಸಿ 2019 ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರದೀಪ್ ಸಿಂಗ್ ಮೊದಲ ರ್ಯಾಂಕ್ ಪಡೆದಿದ್ದಾರೆ.
ಈ ಬಾರಿ ಒಟ್ಟು 829 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜತೀನ್ ಸಿಂಗ್ ಹಾಗೂ ಪ್ರತಿಭಾ ವರ್ಮಾ ಎರಡು ಮತ್ತು ಮೂರನೇ ರ್ಯಾಂಕ್ ಪಡೆದಿದ್ದಾರೆ.
ಟಾಪ್ 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಇದ್ದಾರೆ.25 ರ್ಯಾಂಕ್ ಒಳಗಿನ ಪಟ್ಟಿಯಲ್ಲಿ 9 ಮಂದಿ ಮಹಿಳೆಯರಿದ್ದಾರೆ.ಟಾಪ್ ರ್ಯಾಂಕ್ ಪಡೆದವರ ಮಾಹಿತಿಯನ್ನು ಯುಪಿಎಸ್ಸಿ ಈವರೆಗೆ ಬಹಿರಂಗ ಪಡಿಸಿಲ್ಲ.
ಆಯ್ಕೆಯಾಗಿರುವ 829 ಮಂದಿಯ ಪೈಕಿ 304 ಮಂದಿ ಸಾಮಾನ್ಯ ವಿಭಾಗ, 78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗ, 251 ಇತರ ಹಿಂದುಳಿದ ವರ್ಗ ( ಒಬಿಸಿ), 129 ಪರಿಶಿಷ್ಟ ಜಾತಿ ಮತ್ತು 67 ಮಂದಿ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ.
182 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಕಾಯ್ದಿರಿಸಿದ್ದು 11 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಈ ವೆಬ್ಸೈಟ್ ಮೂಲಕ ಫಲಿತಾಂಶ ನೋಡಬಹುದು: www.upsc.gov.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.