ADVERTISEMENT

ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಆಸ್ಪತ್ರೆಗೆ ದಾಖಲು, ವಿಚಾರಣೆಗೆ ವಿನಾಯಿತಿ

ಪಿಟಿಐ
Published 6 ಜೂನ್ 2019, 10:07 IST
Last Updated 6 ಜೂನ್ 2019, 10:07 IST
ಪ್ರಜ್ಞಾ ಸಿಂಗ್
ಪ್ರಜ್ಞಾ ಸಿಂಗ್   

ಭೋಪಾಲ್: ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಭೋಪಾಲದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹಾಗಾಗಿ ಮಾಲೇಗಾಂವ್ ಸ್ಫೋಟ ಪ್ರಕರಣದ ವಿಚಾರಣೆಗೆ ಹಾಜರಾಗುವುದಕ್ಕೆ ಮುಂಬೈ ವಿಶೇಷ ನ್ಯಾಯಾಲಯದ ಪ್ರಜ್ಞಾ ಅವರಿಗೆ ವಿನಾಯಿತಿ ನೀಡಿದೆ.

ವಿಚಾರಣೆಗೆ ಪ್ರಜ್ಞಾ ಗೈರು ಹಾಜರಾಗಿರುವುದರಿಂದ ಶಕ್ರವಾರ ವಿಚಾರಣೆಗೆ ಹಾಜರಾಗಬೇಕು.ಹೀಗೆ ಹಾಜರಾಗುವಾಗ ವೈದ್ಯಕೀಯ ದಾಖಲೆಯೊಂದಿಗೆ ಹಾಜರಾಬೇಕು ಇಲ್ಲವೇ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ .
ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಬೇಕೆಂದು ಕಳೆದ ವಾರ ಪ್ರಜ್ಞಾ ಮನವಿ ಮಾಡಿದ್ದು, ಈ ಮನವಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯದ ನ್ಯಾಯಮೂರ್ತಿ ತಳ್ಳಿ ಹಾಕಿದ್ದರು.ಸಂಸತ್ತಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿ ಬಂದಿರುವುದಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ.ಹಾಗಾಗಿ ವಿನಾಯಿತಿ ನೀಡಬೇಕೆಂದು ಪ್ರಜ್ಞಾ ಮನವಿ ಸಲ್ಲಿಸಿದ್ದರು.

ಪಿಟಿಐ ಸುದ್ದಿಸಂಸ್ಥೆಯ ಪ್ರಕಾರ, ಪ್ರಜ್ಞಾ ಅವರಿಗೆ ಹೊಟ್ಟೆನೋವು ಕಾಣಿಸಿದ್ದರಿಂದ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಿ ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.ಭೋಪಾಲದಲ್ಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ತಕ್ಷಣವೇ ಪ್ರಜ್ಞಾ ಆಸ್ಪತ್ರೆಗೆ ಹಿಂದಿರುಗಲಿದ್ದಾರೆ ಎಂದು ಪ್ರಜ್ಞಾ ಅವರ ಆಪ್ತೆ ಉಪ್ಮಾ ಹೇಳಿದ್ದಾರೆ.

ADVERTISEMENT

ಪ್ರಜ್ಞಾ ಸಿಂಗ್ ಅವರ ಆರೋಗ್ಯ ಸರಿ ಇಲ್ಲ.ಕಳೆದ ರಾತ್ರಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಔಷಧಿ ನೀಡಲಾಗಿದೆ ಎಂದು ಉಪ್ಮಾ ಹೇಳಿರುವುದಾಗಿ ಪಿಟಿಐ ವರದಿಮಾಡಿದೆ. ಗುರುವಾರ ಬೆಳಗ್ಗೆ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದು,ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ತಕ್ಷಣವೇ ಅವರ ಆಸ್ಪತ್ರೆಗೆ ವಾಪಾಸಾಗಲಿದ್ದಾರೆ ಎಂದಿದ್ದಾರೆ ಉಪ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.