ADVERTISEMENT

ಮಾಲೇಗಾಂವ್‌ ಸ್ಫೋಟ ಪ್ರಕರಣ: ಅನಾರೋಗ್ಯದ ಕಾರಣ ವಿಚಾರಣೆಗೆ ಗೈರಾದ ಪ್ರಜ್ಞಾ

ಅಧಿಕ ರಕ್ತದೊತ್ತಡ

ಪಿಟಿಐ
Published 7 ಜೂನ್ 2019, 1:06 IST
Last Updated 7 ಜೂನ್ 2019, 1:06 IST
   

ಭೋಪಾಲ್‌, ಮುಂಬೈ: 2008 ಮಾಲೇಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವವಿಚಾರಣೆಗೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅನಾರೋಗ್ಯದ ಕಾರಣ ನೀಡಿ ಗುರುವಾರ ಗೈರಾದರು.

ಆದರೆ, ಶುಕ್ರವಾರ(ಜೂನ್ 7)ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಲೇ ಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ವಿ.ಎಸ್.ಪಡಾಲ್ಕರ್‌ ಪ್ರಜ್ಞಾ ಸಿಂಗ್‌ ಪರ ವಕೀಲರಿಗೆ ಸೂಚಿಸಿದ್ದಾರೆ.

ಅಧಿಕ ರಕ್ತದೊತ್ತಡ ಕಾರಣ ಅವರಿಗೆ ಭೋಪಾಲ್‌ನಿಂದ ಮುಂಬೈಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಚಾರಣೆಯಿಂದ ವಿನಾಯಿತಿ ನೀಡುವಂತೆನ್ಯಾಯಾಲಯಕ್ಕೆ ಪ್ರಜ್ಞಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಸಂಸತ್ತಿಗೆ ಸಂಬಂಧಿಸಿದ ಕಾರ್ಯದ ಹಿನ್ನೆಲೆಯಲ್ಲಿಈ ವಾರ ಪೂರ್ತಿವಿಚಾರಣೆಯಿಂದ ವಿನಾಯಿತಿ ನೀಡುವಂತೆ ಕಳೆದ ಸೋಮವಾರ ಪ್ರಜ್ಞಾ ಸಿಂಗ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.