ನವದೆಹಲಿ: ದೇಶದ ದೂರಸಂಪರ್ಕ ಉದ್ದಿಮೆಯ ‘ಆರೋಗ್ಯ’ ಸುಧಾರಿಸುವುದರ ಜೊತೆಗೆ ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗೆ ಪುನಶ್ಚೇತನ ನೀಡುವುದು ದೂರಸಂಪರ್ಕ ಸಚಿವಾಲಯದ ನೂತನ ಸಚಿವ ರವಿಶಂಕರ್ ಪ್ರಸಾದ್ ಅವರ ಪ್ರಥಮ ಆದ್ಯತೆಯಾಗಲಿದೆ.
ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವರಾಗಿ ನೇಮಕಗೊಂಡಿರುವ ಪ್ರಸಾದ್, ‘ಮಾಹಿತಿ ಸಂರಕ್ಷಣಾ ಮಸೂದೆಯನ್ನು ತ್ವರಿತವಾಗಿ ಸಂಸತ್ತಿನಲ್ಲಿ ಮಂಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವುದನ್ನು ತಡೆಯಲು ಕಾನೂನು ಬಲಪಡಿಸುವುದು ನನ್ನ ಆದ್ಯತೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.