ADVERTISEMENT

145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದ 7 ತಿಂಗಳ ಗರ್ಭಿಣಿ ಕಾನ್‍ಸ್ಟೆಬಲ್

ಪಿಟಿಐ
Published 31 ಅಕ್ಟೋಬರ್ 2025, 10:39 IST
Last Updated 31 ಅಕ್ಟೋಬರ್ 2025, 10:39 IST
<div class="paragraphs"><p>ಸೋನಿಕಾ ಯಾದವ್‌</p></div>

ಸೋನಿಕಾ ಯಾದವ್‌

   

ನವದೆಹಲಿ: ಆಂಧ್ರಪ್ರದೇಶದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಏಳು ತಿಂಗಳ ಗರ್ಭಿಣಿಯಾಗಿರುವ ದೆಹಲಿ ಪೊಲೀಸ್ ಕಾನ್‍ಸ್ಟೆಬಲ್ ಸೋನಿಕಾ ಯಾದವ್‌ 145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದಿದ್ದಾರೆ.

ಸದ್ಯ ಸೋನಿಕಾ ಅವರ ಸಾಧನೆ ದೇಶದಾದ್ಯಂತ ಸುದ್ದಿಯಾಗಿದೆ. 30 ವರ್ಷ ವಯಸ್ಸಿನ ಸೋನಿಕಾ ದೆಹಲಿಯ ಉತ್ತರ ಜಿಲ್ಲೆಯಲ್ಲಿ ಕಾನ್‍ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಅ.17ರಂದು ನಡೆದ ಸ್ಪರ್ಧೆಯಲ್ಲಿ ಒಟ್ಟು 145 ಕೆ.ಜಿ ಭಾರ ಎತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಲವು ಭಾರ ಎತ್ತುವ ಸ್ಪರ್ಧೆಗಳಲ್ಲಿ ಸೋನಿಕಾ ಸ್ಪರ್ಧಿಸಿದ್ದಾರೆ.

ADVERTISEMENT

ತರಬೇತಿ ಮತ್ತು ಶಿಸ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧವಾಗಿರಲು ಸಹಾಯ ಮಾಡಿತು ಎನ್ನುತ್ತಾರೆ ಸೋನಿಕಾ.

‘ಸ್ಪರ್ಧೆಯೊಂದಕ್ಕೆ ತರಬೇತಿ ಪಡೆಯುವ ವೇಳೆ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು, ವೈದ್ಯರ ಸಲಹೆ ಕೇಳಿದಾಗ, ಭಾರ ಎತ್ತುವುದನ್ನು ಮುಂದುವರಿಸಬಹುದು, ಆದರೆ ತೂಕದ ಪ್ರಮಾಣವನ್ನು ಕಡಿತಗೊಳಿಸಿ ಎಂದಿದ್ದರು. 145 ಕೆ.ಜಿ ನಾನು ಸಾಮಾನ್ಯವಾಗಿ ಎತ್ತುವ ತೂಕಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಮಗುವಿಗಾಗಲಿ, ಗರ್ಭಕೋಶಕ್ಕಾಗಲಿ ಯಾವುದೇ ತೊಂದರೆಯಾಗಿಲ್ಲ’ ಎಂದಿದ್ದಾರೆ.

‘ಗರ್ಭಿಣಿಯಾದ ಮೇಲೂ ಸ್ಪರ್ಧೆಗೆ ಹೋಗುವ ನನ್ನ ನಿರ್ಧಾರದಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಆದರೆ ನನ್ನ ಪತಿ ಬೆನ್ನೆಲುಬಾಗಿ ನಿಂತರು’ ಎಂದು ಸೋನಿಕಾ ಹೇಳಿದ್ದಾರೆ.

‘ನಮ್ಮ ದೇಹ ಮತ್ತು ಬುದ್ಧಿ ದೊಡ್ಡ ಶಕ್ತಿ. ನಾವು ಆರೋಗ್ಯವಾಗಿದ್ದರೆ ಕುಟುಂಬ, ಮಕ್ಕಳು, ಕೆಲಸ ಎಲ್ಲವನ್ನೂ ನಿಭಾಯಿಸಬಹುದು. ಹೀಗಾಗಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.