ADVERTISEMENT

ಗರ್ಭಿಣಿ ಮೇಲೆ ಅತ್ಯಾಚಾರಕ್ಕೆ ಯತ್ನ: ನೆರವಿಗೆ ಮೊರೆ; ರೈಲಿನಿಂದ ತಳ್ಳಿದ ಆರೋಪಿ

ಏಜೆನ್ಸೀಸ್
Published 7 ಫೆಬ್ರುವರಿ 2025, 6:37 IST
Last Updated 7 ಫೆಬ್ರುವರಿ 2025, 6:37 IST
<div class="paragraphs"><p>ಅತ್ಯಾಚಾರ (ಸಾಂದರ್ಭಿಕ ಚಿತ್ರ)</p></div>

ಅತ್ಯಾಚಾರ (ಸಾಂದರ್ಭಿಕ ಚಿತ್ರ)

   

ತಮಿಳುನಾಡು: 4 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ಪ್ರತಿರೋಧಿಸಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಫೆ.6 ರಂದು ತಿರುಪತಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಘಟನೆ ನಡೆದಿದೆ.

ADVERTISEMENT

ಮಹಿಳೆ ಒಬ್ಬಳೇ ಆಂಧ್ರಪ್ರದೇಶದ ಚಿತ್ತೂರಿಗೆ ಹೊರಟಿದ್ದರು. ಆರಂಭದಲ್ಲಿ ಬೋಗಿಯಲ್ಲಿ ಏಳು ಮಹಿಳೆಯರಿದ್ದರು. ಆದರೆ ಅವರು ಜೋಲಾರ್‌ಪೆಟ್ಟೈ ರೈಲ್ವೆ ನಿಲ್ದಾಣದಲ್ಲಿ ಇಳಿದ ಮೇಲೆ, ಮಹಿಳೆ ಒಬ್ಬರೇ ಬೋಗಿಯಲ್ಲಿ ಇದ್ದರು. ಇದನ್ನು ಗಮನಿಸಿದ ಆರೋಪಿ ಮಹಿಳಾ ಬೋಗಿಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿ, ಸಹಾಯಕ್ಕಾಗಿ ಕಿರುಚಿದ್ದಕ್ಕೆ ರೈಲಿನಿಂದ ಹೊರಕ್ಕೆ ನೂಕಿದ್ದಾನೆ. ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆ ಸಾರ್ವಜನಿಕರಿಗೆ ಕಾಣಿಸಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಮಹಿಳೆಯ ಕೈ, ಕಾಲು ಮತ್ತು ತಲೆಗೆ ಗಾಯಗಳಾಗಿವೆ. ಸದ್ಯ ವೆಲ್ಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಜೋಲಾರ್‌ಪೆಟ್ಟೈ ರೈಲ್ವೇ ‍ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.