ADVERTISEMENT

ಚೀನಾ ಗಡಿಯ ಸವಾಲು ಎದುರಿಸಲೂ ಸನ್ನದ್ಧ: ಭೂ ಸೇನಾ ಮುಖ್ಯಸ್ಥ ನರವಾಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 2:21 IST
Last Updated 12 ಜನವರಿ 2020, 2:21 IST
ಚೀನಾ ಗಡಿಯಲ್ಲಿ ಜನರಲ್ ಮನೋಜ್ ಮುಕುಂದ್ ನರವಾಣೆ (ಸಂಗ್ರಹ ಚಿತ್ರ)
ಚೀನಾ ಗಡಿಯಲ್ಲಿ ಜನರಲ್ ಮನೋಜ್ ಮುಕುಂದ್ ನರವಾಣೆ (ಸಂಗ್ರಹ ಚಿತ್ರ)   

ನವದೆಹಲಿ: ‘ಚೀನಾ ಮತ್ತು ಪಾಕಿಸ್ತಾನ ಸಂಚು ರೂಪಿಸಿ ಒಮ್ಮೆಲೆ ಭಾರತದ ಮೇಲೆ ದಾಳಿ ಮಾಡಿದರೆಭಾರತ ಏಕಕಾಲಕ್ಕೆ ಎರಡು ಯುದ್ಧಗಳನ್ನು ಎದುರಿಸಬೇಕಾಗಬಹುದು. ಇಂಥ ಪರಿಸ್ಥಿತಿ ನಿರ್ವಹಿಸಲು ನಮ್ಮ ಸೇನೆ ಸಿದ್ಧವಿದೆಯೇ?’ ಎಂಬ ಪ್ರಶ್ನೆ ಮತ್ತು ಆತಂಕಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಿತ್ತು.

ಭಾರತೀಯ ಸೇನೆ ಇದೀಗ ಈ ಅಂಶವನ್ನುಗಂಭೀರವಾಗಿ ಪರಿಗಣಿಸಿದೆ. ಇಷ್ಟು ದಿನ ಪಶ್ಚಿಮ ಗಡಿಯತ್ತ (ಪಾಕಿಸ್ತಾನ) ಹೆಚ್ಚು ಗಮನ ಕೊಡುತ್ತಿದ್ದ ಸೇನೆ, ಇದೀಗ ಉತ್ತರ ಮತ್ತು ಪೂರ್ವ (ಚೀನಾ) ಗಡಿಗಳನ್ನು ಬಲಪಡಿಸುವ ಕಾರ್ಯ ಆರಂಭಿಸಿದೆ.

ಭೂಸೇನೆಯ ನೂತನ ಮುಖ್ಯಸ್ಥಮನೋಜ್ ಮುಕುಂದ್ ನರವಾಣೆ ‘ರಿಬ್ಯಾಲೆನ್ಸಿಂಗ್’ (ಮರುಸಮತೋಲನ) ಪ್ರಕ್ರಿಯೆಗೆ ಆದ್ಯತೆ ನೀಡಿದ್ದು, ಅತ್ಯಾಧುನಿಕ ಯುದ್ಧೋಪಕರಣಗಳ ನಿಯೋಜನೆ, ಗಡಿಯವರೆಗೆ ರಸ್ತೆ ಸಂಪರ್ಕ ಸೇರಿದಂತೆ ಹಲವು ಕ್ರಮಗಳು ಆರಂಭಗೊಂಡಿರುವುದನ್ನು ಖಚಿತಪಡಿಸಿದ್ದಾರೆ.

ADVERTISEMENT

ಸೇನಾ ದಿನದ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಅವರು,‘ಸಿಯಾಚಿನ್ ನೀರ್ಗಲ್ಲು ಪ್ರದೇಶ ಮತ್ತು ಶಕ್ಸಗಮ್ ಕಣಿವೆಯಲ್ಲಿ ಭದ್ರತೆಯ ಆತಂಕವನ್ನು ಗುರುತಿಸಿದ್ದೇವೆ. ಅಲ್ಲಿ ರಕ್ಷಣಾ ವ್ಯವಸ್ಥೆ ಸುಧಾರಿಸಲು ಗಮನ ನೀಡಿದ್ದೇವೆ’ ಎಂದುಸ್ಪಷ್ಟಪಡಿಸಿದರು.

ಜನರಲ್ ಮನೋಮ್ ಮುಕುಂದ್ ನರವಾಣೆ

ಎರಡು ಯುದ್ಧಭೂಮಿ, ಎರಡು ತಂತ್ರ

‘ಒಂದು ವೇಳೆ ಎರಡು ದೇಶಗಳು ಒಂದೇ ಸಲ ಯುದ್ಧ ಘೋಷಿಸಿದರೆ, ಪ್ರಾಥಮಿಕ ಮತ್ತು ದ್ವಿತೀಯ ಯುದ್ಧಕಣಗಳನ್ನು ಗುರುತಿಸಿಕೊಳ್ಳುತ್ತೇವೆ. ಪ್ರಾಥಮಿಕ ಯುದ್ಧಭೂಮಿಗೆಹೆಚ್ಚಿನ ಸಂಪನ್ಮೂಲ ನಿಯೋಜಿಸಿ, ದ್ವೀತೀಯ ಯುದ್ಧಕಣದಲ್ಲಿ ರಕ್ಷಣೆಗೆ ಒತ್ತು ನೀಡುತ್ತೇವೆ’ ಎಂದರು.

ಚೀನಾ ಗಡಿಯಲ್ಲಿ ಯಾವುದೇ ಸವಾಲು ಎದುರಿಸಲುಸೇನೆಯನ್ನು ಸಜ್ಜುಗೊಳಿಸಲಾಗಿದೆ.ಅತ್ಯಾಧುನಿಕ ಆಯುಧಗಳ ಶೇಖರಣೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಚೀನಾ ಮತ್ತು ಭಾರತೀಯ ಸೇನೆಗಳ ನಡುವೆ ಬಹುಕಾಲದಿಂದ ಬಾಕಿ ಉಳಿದಿರುವ ಹಾಟ್‌ಲೈನ್ ಸಂಪರ್ಕ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು. ಈ ಬಗ್ಗೆ ಇದ್ದ ಹಲವು ಗೊಂದಲಗಳು ಇದೀಗ ಬಗೆಹರಿದಿವೆ. ದೇಶದ ಉತ್ತರ ಗಡಿಯಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಸೇನೆಯ ಸಾಮರ್ಥ್ಯವೃದ್ಧಿ ಪ್ರಯತ್ನಗಳು ಆರಂಭವಾಗಿವೆ. ಪೂರ್ವ ಗಡಿಯಲ್ಲಿ ಶಸ್ತ್ರಾಸ್ತ್ರ ಸಂಗ್ರಹ, ಅತ್ಯಾಧುನಿಕ ಯುದ್ಧೋಪಕರಣಗಳ ನಿಯೋಜನೆ ಕ್ರಮಗಳು ಆರಂಭವಾಗಿವೆ ಎಂದು ಹೇಳಿದರು.

ಸಿಯಾಚಿನ್ ಮುಖ್ಯ

ಸಿಯಾಚಿನ್ ನೀರ್ಗಲ್ಲು ಪ್ರದೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಿಯಾಚಿನ್ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಒಗ್ಗೂಡಿ ಭಾರತದತ್ತ ಸಂಚು ರೂಪಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದು. ಹೀಗಾಗಿ ಸಿಯಾಚಿನ್‌ ವಿಚಾರದಲ್ಲಿ ನಮ್ಮ ಆದ್ಯತೆ ಎಂದಿನಂತೆ ಮುಂದುವರಿಯುತ್ತದೆ’ ಎಂದು ಹೇಳಿದರು.

‘ಇಂಥ ಬೆಳವಣಿಗೆಗಳು ಎಲ್ಲಿ ಬೇಕಾದರೂ ನಡೆಯಬಹುದು. ಆದರೆ ಸಿಯಾಚಿನ್ ಮತ್ತು ಶಕ್ಸಗಮ್ ಕಣಿವೆಯಲ್ಲಿ ಎರಡೂ ದೇಶಗಳ ಗಡಿಗಳು ಸೇರುತ್ತವೆ. ಹೀಗಾಗಿ ಭದ್ರತೆಯ ಆತಂಕ ಅಲ್ಲಿ ಹೆಚ್ಚು’ ಎಂದು ನರವಾಣೆ ಅಭಿಪ್ರಾಯಪಟ್ಟರು.

ಭಾರತದ ಗಡಿ ಎಂದು ಗುರುತಿಸಿದ ಪ್ರದೇಶದಲ್ಲಿಚೀನಾ ಸೈನಿಕರು ಕಾಣಿಸಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ನರವಾಣೆ, ’ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ಈ ಸಮಸ್ಯೆ ಪರಿಹರಿಸಿಕೊಳ್ಳಲಾಗುವುದು’ ಎಂದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.