
ನವದೆಹಲಿ: ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ‘ಪರಮ ವೀರ ಚಕ್ರ’ ಪುರಸ್ಕೃತರ ಭಾವಚಿತ್ರಗಳಿರುವ ‘ಪರಮ ವೀರ್ ದೀರ್ಘಾ’ ಗ್ಯಾಲರಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಉದ್ಘಾಟಿಸಿದರು.
1975ರ ಇಂಡೊ–ಪಾಕ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥ ಡಿ.16 ಅನ್ನು ಪ್ರತಿ ವರ್ಷ ‘ವಿಜಯ್ ದಿವಸ’ವಾಗಿ ಆಚರಿಸಲಾಗುತ್ತದೆ. ಅದೇ ದಿನದಂದು ರಾಷ್ಟ್ರಪತಿಯವರು ‘ಪರಮ ವೀರ ದೀರ್ಘ’ ಗ್ಯಾಲರಿಯನ್ನು ಉದ್ಘಾಟಿಸಿದ್ದಾರೆ. ಗ್ಯಾಲರಿಯಲ್ಲಿ ಪರಮ ವೀರ ಚಕ್ರ ಪುರಸ್ಕೃತ 21 ಯೋಧರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ.
‘ಗ್ಯಾಲರಿಗೆ ಭೇಟಿ ನೀಡುವ ಸಂದರ್ಶಕರಿಗೆ, ನಮ್ಮ ದೇಶದ ರಕ್ಷಣೆಗಾಗಿ ಹೋರಾಡಿರುವ ವೀರ ಯೋಧರ ಬಗ್ಗೆ ಮಾಹಿತಿ ನೀಡುತ್ತದೆ. ಮಾತೃಭೂಮಿಯ ಸೇವೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರಿಗೆ ಗೌರವ ಸಲ್ಲಿಸುವುದು ಈ ಪ್ರದರ್ಶನಾಲಯದ ಉದ್ದೇಶವಾಗಿದೆ’ ಎಂದು ರಾಷ್ಟ್ರಪತಿಭವನದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.