ADVERTISEMENT

ಮಹಾಶಿವರಾತ್ರಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2026, 7:29 IST
Last Updated 15 ಫೆಬ್ರುವರಿ 2026, 7:29 IST
<div class="paragraphs"><p>ರಾಷ್ಟ್ರಪತಿ  ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ </p></div>

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ

   

-ಪಿಟಿಐ ಚಿತ್ರ

ನವದೆಹಲಿ: ಮಹಾಶಿವರಾತ್ರಿ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ರಾಧಾಕೃಷ್ಣನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ADVERTISEMENT

ಪವಿತ್ರ ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಹೃದಯಪೂರ್ವಕವಾಗಿ ಶುಭಾಶಯಗಳನ್ನು ತಿಳಿಸುತ್ತೇನೆ. ಮಹಾದೇವನ ಕೃಪೆ ನಮ್ಮೆಲ್ಲರ ಮೇಲೂ ಸದಾ ಇರಲಿ ಹಾಗೂ ದೇಶವು ಸದಾಕಾಲ ಪ್ರಗತಿಯ ಮಾರ್ಗದಲ್ಲಿ ಮುಂದುವರಿಯಲಿ ಎಂಬುದು ನನ್ನ ಪ್ರಾರ್ಥನೆ ಎಂದು ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣ ‘ಎಕ್ಸ್’ ಪೋಸ್ಟ್‌ ಹಾಕಿದ್ದಾರೆ.

ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ ಹಂಚಿಕೊಂಡಿದ್ದು, ಕಾಶಿಯಿಂದ ರಾಮೇಶ್ವರಂವರೆಗೂ ಈ ಪವಿತ್ರ ಹಬ್ಬವು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಪ್ರತೀಕವಾಗಿ ನಿಲ್ಲುತ್ತದೆ. ಮಹಾದೇವ ಮತ್ತು ಪಾರ್ವತಿಯ ಆಶೀರ್ವಾದದಿಂದ ಎಲ್ಲರಿಗೂ ಸಂತೋಷ, ಸಮೃದ್ಧಿ ಹಾಗೂ ಆರೋಗ್ಯ ದೊರಕಲಿ ಎಂದು ಉಪರಾಷ್ಟ್ರಪತಿ ಶುಭಾಶಯ ತಿಳಿಸಿದ್ದಾರೆ.

ಶಿವನ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲೆಂದು ಪ್ರಾರ್ಥಿಸುತ್ತೇನೆ. ಮಹಾದೇವನ ಕೃಪೆಯಿಂದ ಎಲ್ಲರಿಗೂ ಸಮೃದ್ಧಿ ಲಭಿಸಲಿ, ನಮ್ಮ ಭಾರತವು ಸಮೃದ್ಧಿಯ ಶಿಖರವನ್ನು ತಲುಪಲಿ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.

ನಾಡಿನ ಜನತೆಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಅಜ್ಞಾನ - ಅಂಧಕಾರ ಕಳೆದು ಜ್ಞಾನದ ಬೆಳಕು ಲೋಕವನ್ನು ಬೆಳಗಿದ ಈ ಶುಭ ದಿನದಂದು ತಮ್ಮೆಲ್ಲರ ಮೇಲೆ ಭಗವಂತನ ಆಶೀರ್ವಾದವಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಡಿನ ಜನತೆಗೆ ಶುಭ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.