ADVERTISEMENT

ವಾಜಪೇಯಿ ಪುಣ್ಯಸ್ಮರಣೆ: ‍ಪ್ರಧಾನಿ ಮೋದಿ, ರಾಷ್ಟ್ರಪತಿಯಿಂದ ಗೌರವ ನಮನ

ಪಿಟಿಐ
Published 16 ಆಗಸ್ಟ್ 2021, 6:52 IST
Last Updated 16 ಆಗಸ್ಟ್ 2021, 6:52 IST
ನವದೆಹಲಿಯಲ್ಲಿರುವ ‘ಸದೇವ್‌ ಅಟಲ್‌’ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೌರವ ನಮನ ಸಲ್ಲಿಸಿದರು.          –ಟ್ವಿಟರ್‌ ಚಿತ್ರ
ನವದೆಹಲಿಯಲ್ಲಿರುವ ‘ಸದೇವ್‌ ಅಟಲ್‌’ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೌರವ ನಮನ ಸಲ್ಲಿಸಿದರು.          –ಟ್ವಿಟರ್‌ ಚಿತ್ರ   

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೂರನೇ ವರ್ಷದ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ‘ಸದೈವ್‌ ಅಟಲ್‌’ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ನಮನ ಸಲ್ಲಿಸಿದರು.

ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಸೇರಿದಂತೆ ಕೇಂದ್ರದ ಹಲವು ಸಚಿವರು ಸ್ಮಾರಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ,‘ ವಾಜ‍ಪೇಯಿ ಅವರ ಆತ್ಮೀಯ ವ್ಯಕ್ತಿತ್ವ, ಪ್ರೀತಿಯ ಸ್ವಭಾವ, ಬುದ್ಧಿವಂತಿಕೆ, ಹಾಸ್ಯ ಸ್ವಭಾವವನ್ನು ಸದಾ ನೆನಪಿಸಿಕೊಳ್ಳುತ್ತೇವೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ. ನಾಗರಿಕರ ಹೃದಯದಲ್ಲಿ ಅಟಲ್‌ ಜೀ ಇದ್ದಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.