ADVERTISEMENT

ಅಸ್ಸಾಂ | ಜೆಇಇ ಪರೀಕ್ಷೆ ಹಗರಣ; ಮುಖ್ಯ ಆರೋಪಿ ಬಂಧನ

ಪಿಟಿಐ
Published 2 ನವೆಂಬರ್ 2020, 5:41 IST
Last Updated 2 ನವೆಂಬರ್ 2020, 5:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಜೆಇಇ ಮುಖ್ಯ ಪರೀಕ್ಷೆ ಹಗರಣದ ಪ್ರಮುಖ ಆರೋಪಿಯನ್ನು ಪೊಲೀಸರು, ಇಲ್ಲಿನ ಲೋಕಪ್ರಿಯ ಗೋಪಿನಾಥ್ ಬೊರ್ಡೊಲಾಯ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಸ್ಥಳೀಯ ‘ಗ್ಲೋಬಲ್ ಎಜು ಲೈಟ್‌’ ಕೋಚಿಂಗ್ ಸಂಸ್ಥೆಯ ಮಾಲೀಕ ಭಾರ್ಗವ್ ದೆಕಾ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ದೆಕಾ ಮತ್ತು ಟಿಸಿಎಸ್‌ ಸಂಸ್ಥೆ ನೌಕರನೊಬ್ಬನಿಗಾಗಿ ಹುಡುಕಾಟ ನಡೆದಿತ್ತು.

ರಾಜ್ಯದಲ್ಲಿ ಜೆಇಇ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅಭ್ಯರ್ಥಿಯ ಹೆಸರಿನಲ್ಲಿ ನಕಲಿ ಅಭ್ಯರ್ಥಿ ಪರೀಕ್ಷೆಯನ್ನು ಎದುರಿಸಿದ್ದ ಎಂಬ ಕಾರಣದಿಂದಾಗಿ ಹಗರಣ ಗಮನಸೆಳೆದಿತ್ತು.

ADVERTISEMENT

ಪೊಲೀಸರು ಇದುವರೆಗೂ ಅಭ್ಯರ್ಥಿ, ಆತನ ತಂದೆ, ಟಿಸಿಎಸ್‌ನ ಇಬ್ಬರು ಸಿಬ್ಬಂದಿ, ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಸೇರಿ ಈವರೆಗೆ ಐವರನ್ನು ಬಂಧಿಸಿದ್ದಾರೆ.ಶನಿವಾರ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಈ ನಡುವೆ, ತನಿಖೆಗೆ ಪೂರಕವಾಗಿ ಅಗತ್ಯ ಅಂಕಿ ಅಂಶ ಒದಗಿಸಬೇಕು ಎಂದು ಕೋರಿ ಪೊಲೀಸರು, ಜೆಇಇ ಪರೀಕ್ಷೆಯನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಪೊಲೀಸರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.