ADVERTISEMENT

ಉತ್ತರ ಪ್ರದೇಶ: ರನ್‌ ವೇದಿಂದ ಜಾರಿದ ವಿಮಾನ

ಪಿಟಿಐ
Published 9 ಅಕ್ಟೋಬರ್ 2025, 14:04 IST
Last Updated 9 ಅಕ್ಟೋಬರ್ 2025, 14:04 IST
<div class="paragraphs"><p>ಮೊಹಮ್ಮದಾಬಾದ್‌ನಲ್ಲಿ ಮಂಗಳವಾರ ನಿಯಂತ್ರಣ ತಪ್ಪಿ ಪೊದೆಯತ್ತ ಉರುಳಿದ&nbsp; ವಿಮಾನ&nbsp;</p></div>

ಮೊಹಮ್ಮದಾಬಾದ್‌ನಲ್ಲಿ ಮಂಗಳವಾರ ನಿಯಂತ್ರಣ ತಪ್ಪಿ ಪೊದೆಯತ್ತ ಉರುಳಿದ  ವಿಮಾನ 

   

– ಪಿಟಿಐ ಚಿತ್ರ

ಫರೂಖಾಬಾದ್‌: ಉತ್ತರ ಪ್ರದೇಶದ ಮೊಹಮ್ಮದಾಬಾದ್‌ನಲ್ಲಿ ಖಾಸಗಿ ವಿಮಾನವೊಂದು ಹಾರಾಟ ಆರಂಭಿಸುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ರನ್‌ವೇ ಪಕ್ಕದ ಪೊದೆಯತ್ತ ಜಾರಿದೆ. ಅದೃಷ್ಟವಶಾತ್‌ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಪೈಲಟ್‌ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. 

ADVERTISEMENT

ಜಿಲ್ಲಾಡಳಿತದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, 'ಜೆಟ್‌ ಸರ್ವೀಸ್‌ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸೇರಿದ ವಿಟಿ–ಡಿಇಝಡ್ ವಿಮಾನವು ಬೆಳಿಗ್ಗೆ 10.30ಕ್ಕೆ ಹಾರಾಟ ಆರಂಭಿಸುವ ಸಮಯದಲ್ಲಿ ನಿಯಂತ್ರಣ ತಪ್ಪಿ, ರನ್‌ ವೇದಿಂದ ಜಾರಿ, ಪಕ್ಕದ ಪೊದೆಯತ್ತ ಉರುಳಿದೆ ಎಂದಿದ್ದಾರೆ. 

ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಬೀರ್‌ ಫ್ಯಾಕ್ಟರಿಯೊಂದರ ವ್ಯವಸ್ಥಾಪಕ ನಿರ್ದೇಶಕರು ನಿರ್ಮಾಣ ಕಾಮಗಾರಿ ಪರಿಶೀಲಿಸಲು ಈ ಜೆಟ್‌ನಲ್ಲಿ ಆಗಮಿಸಿದ್ದರು. ಅವರೂ ಸೇರಿದಂತೆ ಎಲ್ಲಾ ಪ್ರಯಾಣಿಕರು ಹಾಗೂ ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.