ADVERTISEMENT

ದುರ್ಗಾವತಾರದಲ್ಲಿ ಪ್ರಿಯಾಂಕಾ ಪೋಸ್ಟರ್ 

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 10:46 IST
Last Updated 11 ಫೆಬ್ರುವರಿ 2019, 10:46 IST
ಕೃಪೆ: ಎಎನ್ಐ ಟ್ವಿಟರ್
ಕೃಪೆ: ಎಎನ್ಐ ಟ್ವಿಟರ್   

ಲಖನೌ: ಉತ್ತರ ಪ್ರದೇಶದಲ್ಲಿ ರೋಡ್ ಶೋನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಶುಭಕೋರಿ ಕಾಂಗ್ರೆಸ್ದುರ್ಗಾವತಾರದ ಪೋಸ್ಟರ್ ಪ್ರಕಟಿಸಿದೆ.

ಹುಲಿಯ ಮೇಲೆ ದುರ್ಗೆಯಂತೆ ಪ್ರಿಯಾಂಕಾ ಗಾಂಧಿ ಕುಳಿತಿರುವ ಪೋಸ್ಟರ್‌ಗಳು ಲಖನೌದಲ್ಲಿ ಕಾಣಿಸಿಕೊಂಡಿದೆ. ಈ ಪೋಸ್ಟರ್‌ನಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಮಾತೆ ದುರ್ಗೆಯ ಅವತಾರ ಎಂದು ಬರೆಯಲಾಗಿದೆ.

ಪೋಸ್ಟರ್ ಜಗಳ
ಕಾಂಗ್ರೆಸ್ ಪ್ರಿಯಾಂಕಾರನ್ನು ಮಾತೆ ದುರ್ಗೆಗೆ ಹೋಲಿಸಿ ಪೋಸ್ಟರ್ ಪ್ರಕಟಿಸಿದರೆ, ಇತ್ತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜ್ಯವನ್ನು ದೋಚಲು ಬರುತ್ತಿದ್ದಾರೆ ಎಂದು ಫ್ಲೆಕ್ಸ್ ಹಾಕಿದ್ದು ಕಾರ್ಯಕರ್ತರ ನಡುವೆ ವಾಗ್ವಾದವನ್ನುಂಟು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.