ADVERTISEMENT

ಪ್ರಧಾನಿ ಎಜೆಕ್ಟ್‌ ಬಟನ್‌ ಒತ್ತುವ ಪೈಲಟ್‌: ಪ್ರಿಯಾಂಕಾ ವ್ಯಂಗ್ಯ

ಪಿಟಿಐ
Published 17 ಏಪ್ರಿಲ್ 2021, 11:13 IST
Last Updated 17 ಏಪ್ರಿಲ್ 2021, 11:13 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ:‘ಫೋಟೊವುಳ್ಳ ಬೋರ್ಡಿಂಗ್ ಪಾಸ್‌ ಧರಿಸಿದ, ತುರ್ತು ಸಂದರ್ಭದಲ್ಲಿ ಎಜೆಕ್ಟ್‌ ಬಟನ್‌ ಒತ್ತುವ ಪೈಲಟ್‌ನಂತೆ ಪ್ರಧಾನಿ ಕಾಣಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ.

‘ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿನರೇಂದ್ರ ಮೋದಿ ವಿಫಲರಾಗುತ್ತಿದ್ದಾರೆ. ದೇಶದಲ್ಲಿ ಕೋವಿಡ್‌ ಪರಿಸ್ಥಿತಿ ಹದಗೆಡುತ್ತಿದೆ. ಲಸಿಕೆ ರಫ್ತು ಮಾಡುತ್ತಿದ್ದ ದೇಶ ಈಗ ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ’ ಎಂದು ಅವರು ಟೀಕಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಆರ್‌ಟಿ–ಪಿಸಿಆರ್‌ ಪರೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.