ADVERTISEMENT

ಶಬರಿಮಲೆ: ನಾಳೆ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 13:11 IST
Last Updated 2 ನವೆಂಬರ್ 2018, 13:11 IST
   

ಪತ್ತನಂತಿಟ್ಟ: ನವೆಂಬರ್ 3 ಶನಿವಾರ ಮಧ್ಯರಾತ್ರಿಯಿಂದ ನವೆಂಬರ್ 6 ನೇ ತಾರೀಖು ಮಧ್ಯರಾತ್ರಿವರೆಗೆ ಪಂಪಾ, ಇಲವುಂಕಲ್, ನಿಲಯ್ಕಲ್ ಮತ್ತು ಸನ್ನಿಧಾನದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಪಿ.ಬಿ.ನೂಹ್ ಹೇಳಿದ್ದಾರೆ.

ಚಿತ್ತಿರಆಟ್ಟತ್ತಿರುನಾಳ್ ಪ್ರಯುಕ್ತ ನವೆಂಬರ್ 5ರಂದು ಶಬರಿಮಲೆ ಬಾಗಿಲು ತೆರೆಯಲಿದೆ.ಮುಂಜಾಗ್ರತಾ ಕ್ರಮವಾಗಿ ಶಬರಿಮಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಡಶೇರಿಕ್ಕರದಿಂದ ಸನ್ನಿಧಾನದವರೆಗೆ ನಾಲ್ಕು ಪ್ರದೇಶಗಳಲ್ಲಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.

ದಕ್ಷಿಣ ವಲಯ ಎಡಿಜಿಪಿಅನಿಲ್‍ಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ನಾಳೆಯಿಂದ ಸನ್ನಿಧಾನ, ಪಂಪಾ ಮತ್ತು ನಿಲಯ್ಕಲ್‍ನಲ್ಲಿ ಠಿಕಾಣಿ ಹೂಡಲಿದ್ದಾರೆ.

ADVERTISEMENT

5ನೇ ತಾರೀಖಿನಿಂದಶಬರಿಮಲೆ ದೇವರ ದರ್ಶನಕ್ಕೆ ಮಹಿಳೆಯರು ಬಂದರೆ ಅವರ ಸುರಕ್ಷೆಗಾಗಿ ಪೊಲೀಸರು ಸಿದ್ಧರಾಗಿದ್ದಾರೆ ಎಂದು ಪತ್ತನಂತಿಟ್ಟ ಎಸ್‍ಪಿ ಟಿ.ನಾರಾಯಣನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.