ADVERTISEMENT

‌ಹಿಂದಿ ಉತ್ತೇಜಿಸಿದರೆ ಎಲ್ಲ ಭಾಷೆಗೂ ಬಲ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಪಿಟಿಐ
Published 20 ಫೆಬ್ರುವರಿ 2026, 16:01 IST
Last Updated 20 ಫೆಬ್ರುವರಿ 2026, 16:01 IST
<div class="paragraphs"><p>ಅಮಿತ್‌ ಶಾ</p></div>

ಅಮಿತ್‌ ಶಾ

   

ಅಗರ್ತಲಾ: ಹಿಂದಿ ಭಾಷೆಯನ್ನು ಉತ್ತೇಜಿಸಿದಾಗ ಇತರ ಎಲ್ಲಾ ಭಾಷೆಗಳೂ ಗಟ್ಟಿಗೊಳ್ಳುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಹೇಳಿದರು.

ಇಲ್ಲಿ ನಡೆದ ರಾಜಭಾಷಾ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜನರ ಮೇಲೆ ಹಿಂದೆ ಹೇರಿಕೆ ಮಾಡಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಆದರೆ, ನಮ್ಮ ಆಡಳಿತದಲ್ಲಿ ಹಿಂದಿ ಹೇರಿಕೆಯನ್ನು ಕಿತ್ತು ಹಾಕಲಾಗಿದೆ’ ಎಂದು ಹೇಳಿದರು. 

ADVERTISEMENT

‘ಹಿಂದಿ ಮತ್ತು ಇತರ ಯಾವುದೇ ಪ್ರಾದೇಶಿಕ ಭಾಷೆಗಳ ನಡುವೆ ಸಂಘರ್ಷವಿರುವುದಿಲ್ಲ. ಏಕೆಂದರೆ ಎರಡೂ ಭಾಷೆಗಳು ಒಂದೇ ತಾಯಿಯ ಮಕ್ಕಳಾಗಿದ್ದು, ಅವರು ಸಹೋದರಿಯರು. ಅವರು ಒಟ್ಟಾಗಿ ಪ‍್ರಗತಿ ಸಾಧಿಸುತ್ತಾರೆ’ ಎಂದರು. 

‘ಭಾಷೆ ಮತ್ತು ಲಿಪಿಯು ವಿವಾದದ ವಿಷಯವಾಗಲು ಸಾಧ್ಯವಿಲ್ಲ. ಮನೆಯಲ್ಲಿ ಮಕ್ಕಳೊಂದಿಗೆ ನಿಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಿ. ಇಲ್ಲವಾದರೆ ನಿಮ್ಮ ಮಕ್ಕಳು ತಮ್ಮ ಮಾತೃಭಾಷೆಯ ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ದೂರ ಉಳಿಯುತ್ತಾ‌ರೆ. ಮನೆಯಲ್ಲಿ ಸಾಧ್ಯವಾದಷ್ಟೂ ನಾವು ಮಾತೃಭಾಷೆಯನ್ನೇ ಬಳಸಬೇಕು’ ಎಂದಿದ್ದಾರೆ.  

‍ಪ್ರಧಾನಿ ನರೇಂದ್ರ ಮೋದಿಯವರು ಈಶಾನ್ಯ ರಾಜ್ಯಗಳನ್ನು ‘ವಿವಾದ’ದ ಪ್ರದೇಶದಿಂದ ‘ವಿಕಾಸ’ದ ಪ್ರದೇಶವನ್ನಾಗಿ ಬದಲಾಯಿಸಿದ್ದಾರೆ. 

ಮೋದಿ ಪ್ರಧಾನಿಯಾದ ಬಳಿಕ 2014ರಿಂದ ಈವರೆಗೆ, ನಿಷೇಧಿತ ಗುಂಪುಗಳೊಂದಿಗೆ 21 ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 11,000 ಯುವಕರನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.