ADVERTISEMENT

ಪ್ರವಾದಿ ಅವಹೇಳನ ವಿರುದ್ಧ ಪ್ರತಿಭಟನೆ: ಯುಪಿಯಲ್ಲಿ 20 ಪ್ರಕರಣ, 415 ಜನರ ಬಂಧನ 

ಪ್ರವಾದಿ ಮಹಮ್ಮದ್‌ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 11:03 IST
Last Updated 19 ಜೂನ್ 2022, 11:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಪ್ರವಾದಿ ಮಹಮ್ಮದ್ ವಿರುದ್ಧ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ ಹೇಳಿಕೆ ಖಂಡಿಸಿ ವಿವಿಧೆಡೆ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ವರೆಗೆ 20 ಪ್ರಕರಣ ದಾಖಲಿಸಿ, 415 ಜನರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಜೂನ್ 3 ರಂದು ಕಾನ್ಪುರ ಮತ್ತು ಜೂನ್ 10 ರಂದು ಇತರೆ ಒಂಬತ್ತು ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಕಾನ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ 20 ಪೊಲೀಸ್ ಸಿಬ್ಬಂದಿ ಸೇರಿದಂತೆ 40 ಜನರು ಗಾಯಗೊಂಡಿದ್ದರು.

ಪ್ರಯಾಗ್‌ರಾಜ್‌ನಲ್ಲಿ 97, ಸಹರಾನ್‌ಪುರದಲ್ಲಿ 85, ಕಾನ್ಪುರದಲ್ಲಿ 58, ಅಂಬೇಡ್ಕರ್‌ ನಗರ 41, ಮೊರಾದಾಬಾದ್‌ 40, ಹತ್ರಾಸ್‌ 35, ಫಿರೋಜಾಬಾದ್‌ 20, ಖೇರಿ 8 ಮತ್ತು ಜಲೌನ್‌ನಲ್ಲಿ ಐವರನ್ನು ಬಂಧಿಸಲಾಗಿದೆ ಎಂದುಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದರು.

ADVERTISEMENT

ಪ್ರಯಾಗ್‌ರಾಜ್‌ನಲ್ಲಿ ಗುಂಪೊಂದು ಕೆಲ ದ್ವಿಚಕ್ರ ವಾಹನ ಮತ್ತು ಗಾಡಿಗಳಿಗೆ ಬೆಂಕಿ ಹಚ್ಚಿ, ಪೊಲೀಸ್ ವಾಹನ ಸುಟ್ಟು ಹಾಕಲು ಪ್ರಯತ್ನಿಸಿತು. ಅಧಿಕಾರಿಗಳ ಪ್ರಕಾರ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.