ADVERTISEMENT

ಪಶ್ಚಿಮ ಬಂಗಾಳ| ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಂಘರ್ಷ: 2 ಸಾವು

ಪಿಟಿಐ
Published 29 ಜನವರಿ 2020, 14:33 IST
Last Updated 29 ಜನವರಿ 2020, 14:33 IST
ಪಶ್ಚಿಮ ಬಂಗಾಳದಲ್ಲಿ ಪೊಲೀಸರು
ಪಶ್ಚಿಮ ಬಂಗಾಳದಲ್ಲಿ ಪೊಲೀಸರು   

ಬೆರ್ಹಾಂಪೋರ್: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನಾ ಕಾರ್ಯಕ್ರಮದ ವೇಳೆ ಇಬ್ಬರು ಗುಂಡಿಗೆ ಬಲಿಯಾದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಘರ್ಷದಲ್ಲಿ ಒಬ್ಬನಿಗೆ ಗಾಯವಾಗಿದೆ.

ಪೊಲೀಸರ ಪ್ರಕಾರ ಸ್ಥಳೀಯ ಟಿಎಂಸಿ ನಾಯಕ ಮತ್ತು ನಾಗರಿಕ್ ಮಂಚ್ ಎಂಬ ನಾಗರಿಕರ ವೇದಿಕೆ ಸದಸ್ಯರ ನಡುವೆ ಸಿಎಎ ವಿರೋಧಿಸಿ ಬಂದ್ ಆಚರಿಸುವ ಬಗ್ಗೆವಾಗ್ವಾದವುಂಟಾಗಿತ್ತು.

ಬಂದ್‌ ಆಚರಿಸುವುದು ಬೇಡ ಆ ನಿರ್ಧಾರವನ್ನು ಹಿಂಪಡೆಯ ಬೇಕು ಎಂದು ನಾಗರಿಕ್ ಮಂಚ್ ಒತ್ತಾಯಿಸಿತ್ತು. ಈ ವಾಗ್ವಾದ ತಾರಕಕ್ಕೇರಿ ಎರಡೂ ಕಡೆಯವರು ಪರಸ್ಪರಬಾಂಬ್ ಎಸೆದಿದ್ದಾರೆ. ಸಂಘರ್ಷದಲ್ಲಿ ಹಲವಾರು ಬೈಕ್, ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.

ADVERTISEMENT

ಏತನ್ಮಧ್ಯೆ, ಈ ಸಂಘರ್ಷದಲ್ಲಿ ಟಿಎಂಸಿ ಭಾಗಿಯಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಟಿಎಂಸಿ ಸಂಸದ ಅಬು ತಾಹೀರ್, ಇದು ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲಿಗರ ಕೃತ್ಯ ಎಂದು ಆರೋಪಿಸಿದ್ದಾರೆ. ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ತಾಹೀರ್ ಒತ್ತಾಯಿಸಿದ್ದಾರೆ.

ತಮ್ಮ ಪಕ್ಷ ಇದರಲ್ಲಿ ಭಾಗಿಯಾಗಿರಲಿಲ್ಲ. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಶಾಸಕ ಮನೋಜ್ ಚಕ್ರಬೊರ್ತಿ ಹೇಳಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜುಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಈ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿಯೂಸಂಘರ್ಷವುಂಟಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.