
ಶ್ರೀನಗರ: ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದ ಕಾರಣ ಅವುಗಳನ್ನು ನಿಯಂತ್ರಿಸಲು ವಿಧಿಸಿದ್ದ ನಿರ್ಬಂಧಗಳನ್ನು ಮಂಗಳವಾರವೂ ಮುಂದುವರಿಸಲಾಗಿದೆ.
ಇಲ್ಲಿನ ಲಾಲ್ ಚೌಕ್ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ವದಂತಿಗಳಯ ಹರಡದಂತೆ ಎಚ್ಚರವಹಿಸಲು ಅಂತರ್ಜಾಲ ಸೇವೆಗಳ ವೇಗವನ್ನೂ ಕಡಿಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆ–ಕಾಲೇಜುಗಳಿಗೆ ರಜೆ: ಕಾಶ್ಮೀರ ವಿಭಾಗದ ಎಲ್ಲಾ ಶಾಲೆ ಕಾಲೇಜುಗಳು ಮಾರ್ಚ್ 7ರವರೆಗೆ ರಜೆ ನೀಡಲಾಗಿದೆ. ನಿರ್ಬಂಧದ ಕಾರಣ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಜಮ್ಮು–ಕಾಶ್ಮೀರ ಶಿಕ್ಷಣ ಸಚಿವೆ ಸಾಕಿನಾ ಇಟೂ ತಿಳಿಸಿದ್ದಾರೆ.
ಖಮೇನಿ ಹತ್ಯೆ ಖಂಡಿಸಿ ಕೇಂದ್ರ ಪ್ರದೇಶದಾದ್ಯಂತ ಹಲವು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಾಶ್ಮೀರದಲ್ಲಿ 75 ರ್‍ಯಾಲಿಗಳನ್ನು ನಡೆಸಲಾಗಿದ್ದು, ಜಮ್ಮು ಪ್ರಾಂತ್ಯದಲ್ಲಿಯೂ ಸೋಮವಾರ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ಸೋಮವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ 6 ಮಂದಿ ಭದ್ರತಾ ಸಿಬ್ಬಂದಿಯೂ ಸೇರಿ 14 ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.