ADVERTISEMENT

ಸಿಕ್ಕಿಂ: ಜೂ.9ಕ್ಕೆ ಮುಖ್ಯಮಂತ್ರಿಯಾಗಿ ತಮಾಂಗ್ ಪ್ರಮಾಣ

ಪಿಟಿಐ
Published 5 ಜೂನ್ 2024, 13:58 IST
Last Updated 5 ಜೂನ್ 2024, 13:58 IST
ಪ್ರೇಮ್‌ ಸಿಂಗ್ ತಮಾಂಗ್
ಪ್ರೇಮ್‌ ಸಿಂಗ್ ತಮಾಂಗ್   

ಗ್ಯಾಂಗ್ಟಕ್‌: ಸಿಕ್ಕಿಂನಲ್ಲಿ ಬಹುಮತ ಪಡೆದಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್‌ಕೆಎಂ) ಮುಖ್ಯಸ್ಥ ಪ್ರೇಮ್‌ ಸಿಂಗ್ ತಮಾಂಗ್ ಅವರು ಇದೇ 9ರಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತಮಾಂಗ್‌ ಮತ್ತು ಅವರ ಸಂಪುಟದ ಸಚಿವರ ಪ್ರಮಾಣ ವಚನ ಸಮಾರಂಭ ರಾಜಧಾನಿ ಗ್ಯಾಂಗ್ಟಕ್‌ನ ಪಾಲ್ಜೋರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಐದು ವರ್ಷಗಳ ಹಿಂದೆ ನಡೆದಂತೆ, ಇದೇ 9ರಂದು ಪಾಲ್ಜೋರ್‌ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ’ ಎಂದು ತಮಾಂಗ್‌ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ADVERTISEMENT

ಸಿಕ್ಕಿಂ ವಿಧಾನಸಭೆಯ 32 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 31 ಕ್ಷೇತ್ರಗಳನ್ನು ಗೆದ್ದಿರುವ ಎಸ್‌ಕೆಎಂ, ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರವನ್ನೂ ಜಯಿಸಿದೆ. 

ಕೇಂದ್ರದಲ್ಲಿ ಎನ್‌ಡಿಎ ಜತೆ: ‘ಸಿಕ್ಕಿಂ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಇಂದ್ರ ಹ್ಯಾಂಗ್‌ ಸುಬ್ಬ ಅವರು ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಲಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.