
ಚೆನ್ನೈ: ವಿಫಲಗೊಂಡ ಪಿಎಸ್‌ಎಲ್‌ವಿ–ಸಿ62 ಮಿಷನ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೋ ರಾಕೆಟ್ ಹೊತ್ತೊಯ್ದಿದ್ದ ಕೆಸ್ಟ್ರೆಲ್ ಇನಿಷಿಯಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ (ಕಿಡ್– ಮರು ಪ್ರವೇಶ ಕ್ಯಾಪ್ಸೂಲ್) ‘ನಾಶವಾಗದೆ ಉಳಿದಿದೆ ಮತ್ತು ದತ್ತಾಂಶವನ್ನು ರವಾನೆ ಮಾಡಿದೆ’ ಎಂದು ಪೇಲೋಡ್ ಅಭಿವೃದ್ಧಿಪಡಿಸಿದ್ದ ಸ್ಪೇನ್‌ನ ಸ್ಟಾರ್ಟ್ ಅಪ್ ಕಂಪನಿ ಆರ್ಬಿಟಲ್ ಪ್ಯಾರಡೈಮ್ ಹೇಳಿಕೊಂಡಿದೆ.
ಆದರೆ ಇಸ್ರೊ ಜನವರಿ 13ರಂದು ‘ಎಕ್ಸ್’ನಲ್ಲಿ ತಾನು ನೀಡಿದ್ದ ಮಾಹಿತಿಯಲ್ಲಿ , ಸ್ಪೇನ್ ಕಂಪನಿಯ ಪ್ರತಿಪಾದನೆ ಬಗ್ಗೆ ಪ್ರತಿಕ್ರಿಯಿಸಿಲ್ಲ ಅಥವಾ ಖಚಿತಪಡಿಸಿಲ್ಲ.
ಪಿಎಸ್‌ಎಲ್‌ವಿ–ಸಿ62 ಹೊತ್ತೊಯ್ದಿದ್ದ 16 ಉಪಗ್ರಹಗಳಲ್ಲಿ 25 ಕೆಜಿ ತೂಕದ ಕಿಡ್ಸ್ ಕೂಡಾ ಒಂದಾಗಿತ್ತು. ಕಿಡ್ಸ್ 16ನೇ ಪೇಲೋಡ್ (ಉಪಗ್ರಹವಾಹಕ) ಆಗಿತ್ತು. ಜನವರಿ 12ರಂದು ಉಡ್ಡಯನ ವಿಫಲವಾಗಿತ್ತು.
‘ರಾಕೆಟ್‌ನಿಂದ ಬೇರ್ಪಟ್ಟ ಕಿಡ್ಸ್ ಸ್ವಿಚ್‌ಆನ್ ಆಗಿದೆ. ದತ್ತಾಂಶ ರವಾನಿಸಿದೆ. ಅದರ ಪಥವನ್ನು ನಾವು ಪುನರ್‌ರೂಪಿಸುತ್ತಿದ್ದೇವೆ’ ಎಂದು ಸ್ಪೇನ್ ಸ್ಟಾರ್ಟ್ ಅಪ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.