ADVERTISEMENT

ಅನಿರ್ದಿಷ್ಟಕಾಲ ಸಾರ್ವಜನಿಕ ಸ್ಥಳ ಆಕ್ರಮಣ ಸ್ವೀಕಾರಾರ್ಹವಲ್ಲ: ಸುಪ್ರೀಂ ಕೋರ್ಟ್

ಶಾಹೀನ್ ಬಾಗ್‌ ಪ್ರಕರಣ; ಸುಪ್ರೀಂ ಕೋರ್ಟ್‌ ಆದೇಶ

ಪಿಟಿಐ
Published 7 ಅಕ್ಟೋಬರ್ 2020, 7:12 IST
Last Updated 7 ಅಕ್ಟೋಬರ್ 2020, 7:12 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಪ್ರತಿಭಟನೆ ಅಥವಾ ಧರಣಿ ಹೆಸರಲ್ಲಿ ಸಾರ್ವಜನಿಕ ಸ್ಥಳಗಳು ಅಥವಾ ರಸ್ತೆಗಳನ್ನು ಅನಿರ್ದಿಷ್ಟಕಾಲ ಆಕ್ರಮಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್‌ ಬಾಗ್ ಪ್ರದೇಶದಲ್ಲಿ ರಸ್ತೆಬಂದ್‌ ಮಾಡಿರುವುದರ ವಿರುದ್ಧ ವಕೀಲ ಅಮಿತ್ ಸಾಹ್ನಿ ಅವರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೆ.ಕೌಲ್‌ ಅವರ ನೇತೃತ್ವದ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.

ಜತೆಗೆ, ಶಾಹೀನ್‌ಬಾಗ್‌ನಲ್ಲಿರುವ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ತಿಳಿಸಿದೆ.

ADVERTISEMENT

‘ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯಗಳು ಜತೆಯಾಗಿಯೇ ಸಾಗಬೇಕು‘ ಎಂದು ಹೇಳಿರುವ ನ್ಯಾಯಪೀಠ, ಇಂಥ ಸನ್ನಿವೇಶಗಳನ್ನು ನಿರ್ವಹಿಸುವಾಗ ಆಡಳಿತಗಳು ನ್ಯಾಯಾಲಯದ ಹಿಂದೆ ಅಡಗಿಕೊಳ್ಳದೇ, ತಮ್ಮ ವಿವೇಚನೆಯೊಂದಿಗೆ ಕ್ರಮ ಕೈಗೊಳ್ಳಬೇಕು‘ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.