ADVERTISEMENT

ಪುಲ್ವಾಮ ದಾಳಿ: ಅಮಿತ್‌ ಶಾ ಹೇಳಿಕೆಗೆ ಸತ್ಯಪಾಲ್ ಮಲಿಕ್‌ ತಿರುಗೇಟು

ರಾಜ್ಯಪಾಲ ಹುದ್ದೆ ತೊರೆದ ಬಳಿಕ ನಾನು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳುವುದು ತಪ್ಪು ಎಂದು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಹೇಳಿದ್ದಾರೆ.

ಪಿಟಿಐ
Published 25 ಏಪ್ರಿಲ್ 2023, 2:32 IST
Last Updated 25 ಏಪ್ರಿಲ್ 2023, 2:32 IST
ಸತ್ಯಪಾಲ್ ಮಲಿಕ್
ಸತ್ಯಪಾಲ್ ಮಲಿಕ್   

ಜೈಪುರ: ರಾಜ್ಯಪಾಲ ಹುದ್ದೆ ತೊರೆದ ಬಳಿಕ ನಾನು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳುವುದು ತಪ್ಪು ಎಂದು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್‌ ಹೇಳಿದ್ದಾರೆ.

ನಮ್ಮ ಜತೆಗಿನ ಸಂಬಂಧ ಕಡಿದುಕೊಂಡ ಬಳಿಕ ಅವರು ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಮಲಿಕ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಜನ ಯೋಧರು ಹುತಾತ್ಮರಾಗಿದ್ದರು. ಗುಪ್ತಚರ ವೈಫಲ್ಯ ಹಾಗೂ ಯೋಧರ ಸಂಚಾರಕ್ಕೆ ಹೆಲಿಕಾಪ್ಟರ್‌ ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಬಗ್ಗೆ ಮಾತನಾಡಬಾರದು ಎಂದು ನನಗೆ ಪ್ರಧಾನಿ ಮೋದಿ ಹಾಗೂ ಭದ್ರತಾ ಸಲಹಗಾರ ಅಜಿತ್‌ ಧೋಬಾಲ್‌ ನಿರ್ದೇಶಿಸಿದ್ದರು ಎಂದು ಸತ್ಯಪಾಲ್‌ ಮಲಿಕ್‌ ಹೇಳಿದ್ದರು.

ADVERTISEMENT

ಘಟನೆ ನಡೆಯುವ ಸಂದರ್ಭದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು.

‘ಮುಚ್ಚಿ ಹಾಕುವಂಥದ್ದು ಬಿಜೆಪಿ ಏನು ಮಾಡಿಲ್ಲ. ಯಾರಾದರೂ ನಮ್ಮ ಜತೆ ಸಂಬಂಧ ಕಡಿದುಕೊಂಡ ಬಳಿಕ ಆರೋಪ ಮಾಡುತ್ತಿದ್ದರೆ, ಜನ ಹಾಗೂ ಮಾಧ್ಯಮದವರು ಅದರ ಬಗ್ಗೆ ಯೋಚನೆ ಮಾಡಬೇಕು‘ ಎಂದು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಹೇಳಿದ್ದರು.

‘ಪ್ರಧಾನಮಂತ್ರಿ ಹುದ್ದೆಗೆ ರಾಜನಾಥ್‌ ಸಿಂಗ್‌ ಗಂಭೀರ ಅಭ್ಯರ್ಥಿ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಲಿಕ್‌ ಅವರ ಹಣೆಬರಹದಲ್ಲಿ ಇದ್ದರೆ, ಒಂದು ದಿನ ಅಗಿಯೇ ಆಗುತ್ತಾರೆ‘ ಎಂದು ಹೇಳಿದ್ದಾರೆ.

ಅದಾನಿ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಮೌನ್ಯ ಅವರಿಗೆ ಹಾನಿಯುಂಟು ಮಾಡಲಿದೆ ಎಂದಿರುವ ಅವರು, ಇದರ ಜತೆಗೆ ಪುಲ್ವಾಮ ದಾಳಿ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.