ADVERTISEMENT

17 ವರ್ಷದ ಬಾಲಕಿ ಮೇಲೆ ತಂದೆ, ಚಿಕ್ಕಪ್ಪನಿಂದ ಅತ್ಯಾಚಾರ

ಪಿಟಿಐ
Published 17 ನವೆಂಬರ್ 2022, 13:12 IST
Last Updated 17 ನವೆಂಬರ್ 2022, 13:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಉತ್ತರ ಪ್ರದೇಶದ 17 ವರ್ಷದ ಬಾಲಕಿ ಮೇಲೆ ಆಕೆಯ ತಂದೆ ಮತ್ತು ಚಿಕ್ಕಪ್ಪ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಈ ಕುರಿತು ಪುಣೆಯ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಾರೆ.

ತಂದೆ, ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದು, ತಾತ ಕೂಡ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಲೈಂಗಿಕ ಕಿರುಕುಳದ ಕುರಿತು ಕಾಲೇಜಿನ ವಿಶಾಖ ಸಮಿತಿಗೆ ಬಾಲಕಿ ಇತ್ತೀಚೆಗೆ ಹೇಳಿಕೆ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ ದೂರಿನನ್ವಯ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿಯಲ್ಲಿ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

2016ರಿಂದ 2018ರವರೆಗೆ ಮನೆಯಲ್ಲಿದ್ದಾಗ ಬಾಲಕಿ ಮೇಲೆ ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದು, ತಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕುರಿತು ತಂದೆಯಲ್ಲಿ ಬಾಲಕಿ ದೂರಿಕೊಂಡಿದ್ದಳು. ಆದರೆ ಮನೆಯಲ್ಲಿ ಅಮ್ಮ ಇಲ್ಲದಾಗ ತಂದೆ ಕೂಡ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.