ADVERTISEMENT

ಪುಣೆ ಮೇಣದ ಬತ್ತಿ ಕಾರ್ಖಾನೆ ಅಗ್ನಿ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

ಪಿಟಿಐ
Published 18 ಡಿಸೆಂಬರ್ 2023, 4:25 IST
Last Updated 18 ಡಿಸೆಂಬರ್ 2023, 4:25 IST
<div class="paragraphs"><p>ಪುಣೆಯ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭ...</p></div>

ಪುಣೆಯ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭ...

   

ಪಿಟಿಐ

ಪುಣೆ: ಡಿಸೆಂಬರ್ 8 ರಂದು ಪುಣೆಯ ಪಿಂಪ್ರಿ–ಚಿಂಚ್‌ವಾಡ್ ಪ್ರದೇಶದ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಭಾನುವಾರ ರಾತ್ರಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ADVERTISEMENT

ಕಮಲ್ ಚೌರೆ (35) ಮತ್ತು ಉಷಾ ಪಾದ್ವಿ (40) ಮೃತಪಟ್ಟ ಮಹಿಳೆಯರು ಎಂದು ತಿಳಿದುಬಂದಿದೆ. ಏತನ್ಮಧ್ಯೆ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಕಾರ್ಖಾನೆಯ ಮಾಲೀಕನನ್ನು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

‌ಡಿಸೆಂಬರ್ 8ರಂದು ತಾಳವಾಡೆಯಲ್ಲಿರುವ ಮೇಣದ ಬತ್ತಿ ಕಾರ್ಖಾನೆಯಲ್ಲಿ ಮಧ್ಯಾಹ್ನ 2.45ರ ಹೊತ್ತಿಗೆ ಅಗ್ನಿ ಅವಘಡ ಸಂಭವಿಸಿತ್ತು. ದುರಂತದಲ್ಲಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರ್ಖಾನೆಯ ಮಾಲೀಕ ಸೇರಿದಂತೆ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.