ಪುಣೆ: ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಇನ್ನೂ ಪತ್ತೆಹಚ್ಚಲು ಆಗಿಲ್ಲ ಎಂದು ಪುಣೆ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂದೂಕು ತೋರಿಸಿ ವ್ಯಕ್ತಿಯೊಬ್ಬರನ್ನು ಬೆದರಿಸಿದ ಆರೋಪದ ಕಾರಣಕ್ಕೆ ಮನೋರಮಾ, ಅವರ ಪತಿ ದಿಲೀಪ್ ಖೇಡ್ಕರ್ ಹಾಗೂ ಇನ್ನೂ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಪುಣೆಯ ಬಾನೇರ್ ರಸ್ತೆಯಲ್ಲಿನ ಮನೋರಮಾ ಅವರ ಬಂಗಲೆಗೆ ಭಾನುವಾರ ಹಾಗೂ ಸೋಮವಾರ ಪೊಲೀಸರು ಭೇಟಿ ನೀಡಿದರು. ಆದರೆ, ಮನೋರಮಾ ಅವರು ಪತ್ತೆಯಾಗಲಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಪುಣೆ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.