ADVERTISEMENT

ಸಚಿವ ಸಂಪುಟದ ತುರ್ತು ಸಭೆ ಕರೆದ ಪಂಜಾಬ್ ಸಿಎಂ ಭಗವಂತ್ ಮಾನ್

ಪಂಜಾಬ್ ಸಿಎಂ ಭಗವಂತ್ ಮಾನ್ ಸಚಿವ ಸಂಪುಟದ ತುರ್ತು ಸಭೆ ಕರೆದಿದ್ದಾರೆ.

ಪಿಟಿಐ
Published 5 ಅಕ್ಟೋಬರ್ 2023, 7:36 IST
Last Updated 5 ಅಕ್ಟೋಬರ್ 2023, 7:36 IST
ಭಗವಂತ್ ಮಾನ್
ಭಗವಂತ್ ಮಾನ್   

ಪಂಜಾಬ್: ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ತಮ್ಮ ನಿವಾಸದಲ್ಲಿ ಸಚಿವ ಸಂಪುಟದ ತುರ್ತು ಸಭೆ ಕರೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯ ಯಾವುದೇ ಅಧಿಕೃತ ಕಾರ್ಯಸೂಚಿ ಬಿಡುಗಡೆ ಮಾಡಿಲ್ಲವಾದರೂ, ಸಟ್ಲೆಜ್ ಹಾಗೂ ಯಮುನಾ ನದಿಗಳ ಸಂಪರ್ಕ (SYL) ಕಾಲುವೆ ವಿವಾದದ ಬಗ್ಗೆ ಸಚಿವರ ಮಂಡಳಿ ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಕಾಲುವೆಯ ಒಂದು ಭಾಗವನ್ನು ನಿರ್ಮಿಸಲು ಪಂಜಾಬ್‌ನಲ್ಲಿ ಹಂಚಿಕೆ ಮಾಡಲಾದ ಭೂಮಿಯ ಭಾಗವನ್ನು ಸರ್ವೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ ಒಂದು ದಿನದ ನಂತರ ಈ ಸಭೆ ಕರೆಯಲಾಗಿದೆ

ADVERTISEMENT

ರಾಜ್ಯದಲ್ಲಿ ಒಂದೇ ಒಂದು ಹನಿ ಹೆಚ್ಚುವರಿ ನೀರಿಲ್ಲ ಎಂದು ಪಂಜಾಬ್‌ನ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಪಾದಿಸಿವೆ. ಆದರೆ ಹರಿಯಾಣದ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಸ್ವಾಗತಿಸಿದ್ದು, ರಾಜ್ಯದ ಜನರು ಎಸ್‌ವೈಎಲ್ ನೀರನ್ನು ಪಡೆಯಲು ವರ್ಷಗಳಿಂದ ಕಾಯುತ್ತಿದ್ದಾರೆ ಎಂದು ಹೇಳಿವೆ.

ಇನ್ನು ಪಂಜಾಬ್ ಸಚಿವ ಸಂಪುಟದ ತುರ್ತು ಸಭೆಯಲ್ಲಿ ನೂತನ ಅಡ್ವೊಕೇಟ್ ಜನರಲ್ ನೇಮಕದ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.