ಚಂಡೀಗಢ: ಮಾದಕ ವಸ್ತುಗಳ ವಿರುದ್ಧದ ಪಂಜಾಬ್ ರಾಜ್ಯ ಸರ್ಕಾರದ ಅಭಿಯಾನದ ಅಡಿಯಲ್ಲಿ ಈವರೆಗೆ ಸುಮಾರು 22,377 ಮಂದಿ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
‘ನಶೆಯ ವಿರುದ್ಧ ಯುದ್ಧ’ ಅಭಿಯಾನದಡಿಯಲ್ಲಿ 113 ಜನ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. 1.5 ಕೆ.ಜಿ ಹೆರಾಯಿನ್, 5 ಕೆ.ಜಿ ಓಪಿಯಂ ಹಾಗೂ 31,237 ಮತ್ತು ಬರಿಸುವ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಅಭಿಯಾನ ಶುರುವಾದಾಗಿನಿಂದ 138 ದಿನಗಳಲ್ಲಿ ಬಂಧಿತರ ಸಂಖ್ಯೆ 22,377ಕ್ಕೆ ಏರಿಕೆಯಾಗಿದೆ.
1,300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ 180 ತಂಡಗಳು ರಾಜ್ಯದಾದ್ಯಂತ ಗುರುವಾರ 433 ಕಡೆ ದಾಳಿ ನಡೆಸಿವೆ. ಒಟ್ಟು 81 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ವಿಶೇಷ ಡಿಜಿಪಿ ಅರ್ಪಿತ್ ಶುಕ್ಲಾ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.