ADVERTISEMENT

ಪಂಜಾಬ್‌: ತನಿಖೆಗೆ ಸಿಬಿಐ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಅಗತ್ಯ

ಪಿಟಿಐ
Published 10 ನವೆಂಬರ್ 2020, 15:16 IST
Last Updated 10 ನವೆಂಬರ್ 2020, 15:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ರಾಜ್ಯದಲ್ಲಿ ಯಾವುದೇ ಪ್ರಕರಣದ ತನಿಖೆಯನ್ನು ನಡೆಸುವುದಕ್ಕೆ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕು ಎನ್ನುವ ಅಧಿಸೂಚನೆಯನ್ನು ಪಂಜಾಬ್‌ ಸರ್ಕಾರ ನ.8ರಂದು ಹೊರಡಿಸಿದೆ.

ಈ ಮೂಲಕ ಇಂಥ ತಿದ್ದುಪಡಿಯನ್ನು ತಂದಿರುವ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಪಟ್ಟಿಗೆ ಪಂಜಾಬ್‌ ಕೂಡಾ ಸೇರ್ಪಡೆಯಾಗಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್‌, ಚತ್ತೀಸ್‌ಗಡ ರಾಜ್ಯವು ಈಗಾಗಲೇ ಸಿಬಿಐಗೆ ನೀಡಿರುವ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದಿವೆ.

‘ದೆಹಲಿ ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ 1946ರ ಸೆಕ್ಷನ್‌ 6ರಡಿ ನೀಡಿರುವ ಅಧಿಕಾರ ಬಳಸಿಕೊಂಡು, ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲಾಗಿದೆ’ ಎಂದು ಸರ್ಕಾರವು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.